ETV Bharat / state

ಶೂನ್ಯ ತೆರಿಗೆ ರಿಯಾಯತಿ ನೀಡಿ: ಕೈಮಗ್ಗ ನೇಕಾರರಿಂದ ಸರ್ಕಾರಕ್ಕೆ ಆಗ್ರಹ

ಈಗಾಗಲೇ ಕೈಮಗ್ಗ ಉದ್ಯಮಗಳು ಮತ್ತು ಸಣ್ಣ ಕೈಗಾರಿಕೆಗಳು ಅಳಿವಿನಂಚಿನಲ್ಲಿವೆ. ಆದ್ದರಿಂದ ಸರ್ಕಾರ ಕೈಮಗ್ಗ ನೇಕಾರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಗಾಂಧಿವಾದಿ ಪ್ರಸನ್ನ ಸರ್ಕಾರವನ್ನು ಆಗ್ರಹಿಸಿದರು.

ಕೈಮಗ್ಗ ಉದ್ಯಮಗಳಿಗೆ ಶೂನ್ಯ ತೆರಿಗೆ ರಿಯಾಯತಿ ನೀಡಲು ಆಗ್ರಹ
author img

By

Published : Nov 19, 2019, 10:28 AM IST

ಯಾದಗಿರಿ: ಕೈಮಗ್ಗ ಕಾರ್ಮಿಕರು ತಮ್ಮ ಹಕ್ಕನ್ನು ಪಡೆಯಬೇಕಾದರೆ ಹೋರಾಟ ನಡೆಸಬೇಕಾಗಿರುವುದು ಅನಿವಾರ್ಯವಾಗಿದೆ. ಒಂದ್ವೇಳೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನನ್ನ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಗಾಂಧಿವಾದಿ ಪ್ರಸನ್ನ ಎಚ್ಚರಿಸಿದರು.

ಕೈಮಗ್ಗ ಉದ್ಯಮಗಳಿಗೆ ಶೂನ್ಯ ತೆರಿಗೆ ರಿಯಾಯಿತಿ ನೀಡಲು ಆಗ್ರಹ

ಸುರಪುರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಕೈಮಗ್ಗ ನೇಕಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಸಣ್ಣ ಕೈಮಗ್ಗಗಳಿಗೆ ತೆರಿಗೆ ರಿಯಾಯಿತಿ ನೀಡದ ಕೇಂದ್ರ ಸರ್ಕಾರ, ದೊಡ್ಡ ಉದ್ಯಮಿಗಳಾದ ಅದಾನಿ, ಅಂಬಾನಿಗಳಿಗೆ ನೂರಾರು ಕೋಟಿ ರೂ ತೆರಿಗೆ ರಿಯಾಯಿತಿ ನೀಡುತ್ತದೆ. ಈಗಾಗಲೇ ಕೈಮಗ್ಗ ಉದ್ಯಮಗಳು ಮತ್ತು ಸಣ್ಣ ಕೈಗಾರಿಕೆಗಳು ಅಳಿವಿನಂಚಿನಲ್ಲಿವೆ. ಆದ್ದರಿಂದ ಸರ್ಕಾರ ಕೈಮಗ್ಗ ನೇಕಾರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಉಪವಾಸ ಸತ್ಯಾಗ್ರಹದ ವೇಳೆ ಆಗಮಿಸಿದ ಕೇಂದ್ರ ಸಚಿವ ಸದಾನಂದ ಗೌಡ ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಜೊತೆ ಮಾತನಾಡುವ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಅದಕ್ಕಾಗಿ ಒಂದು ತಿಂಗಳ ಕಾಲಾವಕಾಶವನ್ನೂ ಕೇಳಿದ್ದರು. ಅವರು ಕೇಳಿದ ಒಂದು ತಿಂಗಳ ಕಾಲಾವಧಿಯ ಗಡುವು ಮುಗಿದಿದೆ. ನವೆಂಬರ್ ಅಂತ್ಯದೊಳಗೆ ಕೇಂದ್ರ ಸರ್ಕಾರ ಸಣ್ಣ ಕೈಮಗ್ಗ ಉದ್ಯಮಗಳಿಗೆ ಶೂನ್ಯ ತೆರಿಗೆ ರಿಯಾಯಿತಿ ನೀಡದಿದ್ದರೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಆ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಅಸಹಾಕಾರ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.‌

ಸಮಾವೇಶಕ್ಕೆ ಚರಕ ನೂಲುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಗಪ್ಪಾ ಮಂಟೆ, ಚಿಂತಕ ಕೆಂಚಾ ರೆಡ್ಡಿ, ವಿಠಪ್ಪ ಗೊರಂಟಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

Intro:ದೊಡ್ಡ ಉದ್ಯಮಿಗಳಿಗೆ ಮಹತ್ವ ನೀಡುತ್ತಿರುವ ಸರ್ಕಾರಗಳು ಸಣ್ಣ ಕೈಮಗ್ಗಗಳಿಗೆ ನಿರ್ಲಕ್ಷ್ಯ ತೋರುತ್ತಿದ್ದು ರಾಕ್ಷಸಿ ಆರ್ಥಿಕತೆಗೆ ಉತ್ತೆಜನ ನೀಡುತ್ತಿವೆ, ಸರ್ಕಾರಗಳ ಈ ನೀತಿ ವಿರುದ್ದ ಗಾಂಧಿವಾದಿ ಪ್ರಸನ್ನ ಅವರು ಹಮ್ಮಿಕೊಂಡ ಪವಿತ್ರ ಆರ್ಥಿಕತೆ ಚಳುವಳಿಗೆ ಯಾದಗಿರಿಯಲ್ಲಿಂದು ಭಾರಿ ಬೆಂಬಲ ವ್ಯಕ್ತವಾಗಿದೆ. ಪ್ರಸನ್ನ ಅವರ ನೇತ್ರತ್ವದಲ್ಲಿ ಮುಂದುವರೆದ ಸತ್ಯಾಗ್ರಹ ಭಾಗವಾದ ಹೋರಾಟಕ್ಕೆ ಜಿಲ್ಲೆಯಲ್ಲಿ ನಡೆದ ನೇಕಾರರ ಸಮವೇಶ ಬಹಳಷ್ಟು ಮಹತ್ವ ಪಡೆದುಕೊಂಡಿತು...

Body:ಸಣ್ಣ ಕೈಮಗ್ಗ ಉದ್ಯಮಗಳಿಗೆ ಕೇಂದ್ರ ಸರ್ಕಾರ ಶೂನ್ಯ ತೆರಿಗೆ ಮತ್ತು ಸಣ್ಣ ವಿದ್ಯುತ್ ಕೈಮಗ್ಗಗಳಿಗೆ ತೆರಿಗೆಯಲ್ಲಿ ರಿಯಾಯತಿ ನೀಡುಬೇಕು ಅಂತ ಆಗ್ರಹಿಸಿ ಕಳೆದ ತಿಂಗಳು ಬೆಂಗಳೂರಿನಲ್ಲಿ ಅನಿರ್ಧಿಷ್ಟ ಸತ್ಯಗ್ರ ನಡೆಸುವ ಮೂಲಕ ಗಾಂಧಿವಾದಿ ಪ್ರಸನ್ನ ಎಲ್ಲರ ಗಮನ ಸೆಳೆದಿದ್ದರು. ಪ್ರಸನ್ನ ಅವರ ಹೊರಾಟಕ್ಕೆ ಮಣಿದು ಅತ್ಯಗ್ರಹ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಸದಾನಂದ ಗೌಡ ಪ್ರಸನ್ನ ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಜೋತೆ ತಮ್ಮನ್ನ ಮಾತನಾಡಿಸಲು ಒಂದು ತಿಂಗಳು ಕಾಲಾವಕಾಶ ನೀಡುವಂತೆ ಕೇಳಿ ಪ್ರಸನ್ನ ಅವರ ಉಪವಾಸ ಸತ್ಯಗ್ರಹ ಹಿಂಪಡೆಯುವಂತೆ ಮನವಿ ಮಾಡಿಕೊಂಡಿದ್ದರು. ಸಚಿವರ ಮನವಿಯಂತೆ ಅಂದು ಪ್ರಸನ್ನ ತಮ್ಮ ಉಪವಾಸ ಸತ್ಯಾಗ್ರಹ ಹಿಂಪಡೆದಿದ್ದರು, ಆದ್ರೆ ಉಪವಾಸ ಸತ್ಯಗ್ರಹ ಕೈ ಬಿಟ್ಟ ಪ್ರಸನ್ನ ಅವರು ಮಾತ್ರ ತಮ್ಮ ಹೋರಾಟ ಮಾತ್ರ ಮುಂದುವರೆಸಿದ್ದಾರೆ. ರಾಜ್ಯದ ಹಲೆವೆಡೆ ಸಂಚಾರ ನಡೆಸಿ ಸಮಾವೆಶಗಳನ್ನ ನಡೆಸುವ ಮೂಲಕ ಕೈಮಗ್ಗ ಕಾರ್ಮಿಕರಲ್ಲಿ ಅರಿವು ಮೂಡಿಸುತ್ತಿದ್ದರೆ. ಅದರಂತೆ ಇಂದು ಯಾದಗಿರಿ ಜಿಲ್ಲೆಯ ಸುರಪುರ ನಗರದ ರಂಗನ ಪೇಟೆ ಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ನೇಕಾರ ಸಮಾವೇಶದಲ್ಲಿ ಪ್ರಸನ್ನ ಅವರು ಪಾಲ್ಗೊಂಡು ಕೈಮಗ್ಗ ಕಾರ್ಮಿಕರು ತಮ್ಮ ಹಕ್ಕನ್ನ ಪಡೆಬೇಕಾದ್ರೆ ಹೋರಾಟ ನಡಬೇಕಾಗಿರುವದು ಅನಿವಾರ್ಯವಾಗಿದೆ, ಒಂದು ವೇಳೆ ಸರ್ಕಾರ ನಮ್ಮ ಬೇಡಕೆಗಳು ಈಡೇರಿಸದಿದ್ದರೆ ನನ್ನ ಅನಿರ್ಧಿಷ್ಟ ಸತ್ಯಗ್ರಹ ಮುಂದುವರೆಯಲಿದೆ ಇದಕ್ಕೆ ನಿಮ್ಮ ಬೆಂಬಲವು ಅತ್ಯಗತ್ಯ ಸಮವೇಶದಲ್ಲಿ ಪಾಲ್ಗೊಂಡಂತಾ ಕಾರ್ಮಿಕರಲ್ಲಿ ಮನವಿ ಮಾಡಿದ್ದಾರೆ...

ಬೈಟ್: 01 ಪ್ರಸನ್ನ- ಗಾಂಧಿವಾದಿ ‌..

ಇಂದು ನೇಕಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಸುರಪುರಕ್ಕೆ ಆಗಮಿಸಿದಂತಾ ಗಾಂಧಿವಾದಿ ಪ್ರಸನ್ನ ಸಣ್ಣ ಕೈಮಗ್ಗಗಳಿಗೆ ರೀಯಾಯತಿ ನೀಡದ ಕೇಂದ್ರ ಸರ್ಕಾರ ಬಹುದೊಡ್ಡ ಉದ್ಯಮಿಗಳಾದಂತಾ ಅದಾನಿ, ಅಂಬಾನಿ ಅಂತವರಿಗೆ ನೂರಾರು ಕೋಟಿ ತೆರಿಗೆ ರಿಯತಿ ನೀಡುತ್ತದೆ. ಈಗಾಗಲೆ ಸಣ್ಣ ಕೈಮಗ್ಗ ಉದ್ಯಮಗಳು, ಮತ್ತು ಸಣ್ಣ ಕೈಗಾರಿಕೆಗಳು ಅಳವಿನ ಅಂಚಿನಲ್ಲಿವೆ ಅಂತ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡೆಸಿದರು, ತಮ್ಮ ಉಪವಾಸ ಸತ್ಯಾಗ್ರಹದ ವೇಳೆ ಕೇಂದ್ರ ಸಚಿವ ಸದಾನಂದಗೌಡ ಅವರು ಕೇಳಿದ ಒಂದು ತಿಂಗಳ ಕಾಲ ಕಾಲಾವಧಿ ಗಡವು ಮುಗಿದಿದೆ. ನವೆಂಬರ್ ಕೊನೆ ವರೆಗೆ ಕೇಂದ್ರ ಸರ್ಕಾರ ಸಣ್ಣ ಕೈಮಗ್ಗ ಉದ್ಯಮಗಳಿಗೆ ಶೂನ್ಯ ತೆರಿಗೆ ರಿಯಾಯತಿ ನೀಡದಿದ್ದರೆ ಬೆಂಗಳೂರಿನಲ್ಲಿ ಬೃಹತ್ ಸಮವೇಶ ನಡೆಸಲಗುವದು, ಆ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಅಸಹಕಾರ ಚಳವಳಿ ನಡೆಸುವದಾಗಿ ಅಂತ ಎಚ್ಚರಿಕೆ ನೀಡಿದ್ದಾರೆ..‌

ಬೈಟ್:02 ಪ್ರಸನ್ನ- ಗಾಂಧಿವಾದಿ

ರಂಗನ ಪೇಟೆ ಯಲ್ಲಿ ನಡೆದ ನೇಕಾರರ ಸಮವೇಶವನ್ನ ಚರಕ ನೂಲುವ ಮೂಲಕ ಚಾಲನೆ ನೀಡಲಾಯಿತು, ಕಾರ್ಯಕ್ರಮದಲ್ಲಿ ಸಂಗಪ್ಪಾ ಮಂಟೆ, ಚಿಂತಕರಾದಂತ ಕೆಂಚಾ ರೆಡ್ಡಿ, ವಿಠಪ್ಪ ಗೊರಂಟಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು, ಇನ್ನ ಸಮಾವೇಶದಲ್ಲಿ ದೇಶದ ಬಹುದೊಡ್ಡ ಉದ್ಯಮಗಳಿಂದ ಸಣ್ಣ ಉದ್ಯಮಗಳು ನಾಶಿಸುವಂತಾಗಿದೆ. ಈ ಹಿನ್ನೆಲೆ ಪ್ರಸನ್ನ ಅವರ ಆರ್ಥಿಕ ಬದಲಾವಣೆ ಚಳುವಳಿಗೆ ನಾವು ಸಾತ್ ನೀಡುವದಾಗಿ ನೇಕಾರ ಸಂಘದ ಅಧ್ಯಕ್ಷ ತಿಳಿಸಿದ್ದಾರೆ...

ಬೈಟ್: 03 ವೀರಸಂಗಪ್ಪಾ ಹಾವೇರಿ- ನೇಕಾರ ಸಂಘದ ತಾಲ್ಲೂಕು ಅಧ್ಯಕ್ಷ...

Conclusion:ಒಟ್ಟಾರೆಯಾಗಿ ದೇಶದ ಆರ್ಥಿಕತೆ ಮತ್ತು ಪರಿಸರ ಉಳಿಯುವಿಕೆಗಾಗಿ ಗಾಂಧಿವಾದಿ ಪ್ರಸನ್ನ ಅವರು ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಚಳುವಳಿ ಮಾತ್ರ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆಯತ್ತೆ ಅನ್ನೋದು ಮಾತ್ರ ಕಾದು ನೋಡಬೇಕಿದೆ...ಇಂದು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.