ಯಾದಗಿರಿ: ಶಹಪುರ ತಾಲೂಕಿನ ಇಂಗಳಗಿ ಗ್ರಾಮದ ಯುವತಿಯೊಬ್ಬಳು ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಗಂಭೀರವಾಗಿ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಾಳೆ.
ಇಂಗಳಗಿ ಗ್ರಾಮದ ಸುಚಿತ್ರಾ (17) ಮೃತಪಟ್ಟ ಯುವತಿ. ಅಡುಗೆ ಕೋಣೆಯಲ್ಲಿ ಚಹಾ ಮಾಡಲು ತೆರಳಿದ್ದ ಈಕೆ ಗ್ಯಾಸ್ ಒಲೆ ಆನ್ ಮಾಡಿ ಲೈಟರ್ ಹುಡುಕಲು ತೆರಳಿದ್ದಾಳೆ. ಆದರೆ ಒಲೆಯಿಂದ ಗ್ಯಾಸ್ ಸೋರಿಕೆಯಾಗಿದ್ದ ಪರಿಣಾಮ ಯುವತಿ ಲೈಟರ್ನಿಂದ ಬೆಂಕಿ ಹೊತ್ತಿಸಿದಾಗ ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಯುವತಿಯ ಬಹುತೇಕ ದೇಹಭಾಗ ಸುಟ್ಟು ಹೋಗಿವೆ.
ಗಾಯಗೊಂಡ ಯುವತಿಯನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕಳೆದ 15 ದಿನಗಳ ಹಿಂದೆ ದಾಖಲಿಸಲಾಗಿತ್ತು. ಆದ್ರೆ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಭೀಮರಾಯ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.