ಸುರಪುರ(ಯಾದಗಿರಿ): ಲೋಕ ಕಲ್ಯಾಣಾರ್ಥವಾಗಿ ಸುರಪುರ ತಾಲೂಕಿನ ತಿಂಥಣಿಯಲ್ಲಿರುವ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಗಣ ರುದ್ರಯಾಗ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನರೆವೇರಿಸಲಾಯಿತು.
ಬೆಳಗ್ಗೆಯಿಂದ ಆರಂಭಗೊಂಡ ಹೋಮ ಯಜ್ಞವು ಮಧ್ಯಾಹ್ನದವರೆಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅನೇಕ ಜನ ಪ್ರಾಜ್ಞರು, ಪುರೋಹಿತರು ಭಾಗವಹಿಸಿ ಹೋಮ ಯಜ್ಞವನ್ನು ನಡೆಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಮೌನೇಶ್ವರ ಸ್ವಾಮೀಜಿ ಅವರು ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಮೌನೇಶ್ವರ ದೇವಸ್ಥಾನದಲ್ಲಿ ಗಣ ರುದ್ರ ಹೋಮ ಯಾಗ ಹಮ್ಮಿಕೊಳ್ಳಲಾಗಿದ್ದು, ಇದರ ಮೂಲಕ ನಾಡಿಗೆ ಉತ್ತಮವಾದ ಮಳೆ - ಬೆಳೆ ಸಮೃದ್ಧಿ ಸಿಗಲಿ ಹಾಗೂ ಜಗತ್ತಿಗೆ ಅಂಟಿಕೊಂಡಿರುವ ಕೊರೊನಾ ಮಹಾಮಾರಿಯು ತೊಲಗಲಿ ಹಾಗೂ ಸಮಸ್ತ ಭಕ್ತರ ಇಷ್ಟಾರ್ಥಗಳು ಈಡೇರಲಿ ಎಂದು ಮೌನೇಶ್ವರರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಇನ್ನು ಗಣ ರುದ್ರ ಹೋಮ ಯಾಗದಲ್ಲಿ ತಿಂಥಣಿ, ಬಂಡೊಳ್ಳಿ, ಅರಳಹಳ್ಳಿ, ದೇವಾಪುರ ಸೇರಿದಂತೆ ಅನೇಕ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.