ಯಾದಗಿರಿ: ಜಿಲ್ಲೆಯಲ್ಲಿಂದು ಮತ್ತೆ 4 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸುರಪುರ ತಾಲೂಕಿನ ದಿವಳಗುಡ್ಡದ 27 ವರ್ಷದ ಮಹಿಳೆ (ಪಿ-8227), ದಿವಳಗುಡ್ಡದ 31 ವರ್ಷದ ಪುರುಷ (ಪಿ-8228), ಯಾದಗಿರಿ ತಾಲೂಕಿನ ಲಿಂಗೇರಿಯ 78 ವರ್ಷದ ಮಹಿಳೆ (ಪಿ-8229), ಯಾದಗಿರಿ ತಾಲೂಕಿನ ಅಲ್ಲಿಪೂರ ಗ್ರಾಮದ 32 ವರ್ಷದ ಮಹಿಳೆ (ಪಿ-8230) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕು ತಗುಲಿದ ಇವರೆಲ್ಲರ ಸಂಪರ್ಕ ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ತೊಡಗಿದೆ.
ಸೋಂಕು ಪತ್ತೆಯಾದವರನ್ನೆಲ್ಲ ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.