ಸುರಪುರ: ತಾಲೂಕಿನ ಲಕ್ಷ್ಮೀಪುರ ಗ್ರಾಮದ ಮರಡಿ ಮಲ್ಲಿಕಾರ್ಜುನ ದೇವಸ್ಥಾನ ಬಳಿ ಬೀಡು ಬಿಟ್ಟಿರುವ ನೂರಾರು ಮಂಗಗಳ ಹಸಿವು ನೀಗಿಸುವ ಮೂಲಕ ವೀರಶೈವ ಲಿಂಗಾಯತ ಯುವ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಶೇಖರ ಡೊಣೂರ ಮಾನವೀಯತೆ ಮೆರೆದಿದ್ದಾರೆ.
ಲಾಕ್ಡೌನ್ನಿಂದಾಗಿ ದೇವಸ್ಥಾನಕ್ಕೆ ಭಕ್ತರು ಆಗಮಿಸದ ಪರಿಣಾಮ ಆಹಾರ ಸಿಗದೆ ಗೋಳಿಡುತ್ತಿದ್ದ ಮಂಗಗಳಿಗೆ 10 ಕೆಜಿ ಅಕ್ಕಿಯ ಅನ್ನ ಮತ್ತು ನೀರು ಹಾಕುವ ಮೂಲಕ ಹಸಿವು ನೀಗಿಸಿದ್ದಾರೆ. ಈ ಕಾರ್ಯಕ್ಕೆ ಡೊಣೂರ ಅವರ ಗೆಳೆಯ ದಶರಥ ನಾಯಕ ಕೂಡ ಕೈ ಜೋಡಿಸಿದ್ದಾರೆ.