ಯಾದಗಿರಿ: ಕೃಷ್ಣ ನದಿಯ ಪ್ರವಾಹದಲ್ಲಿ ಕುದುರೆಯೊಂದು ಕೊಚ್ಚಿ ಹೋಗುತ್ತಿದ್ದ ದೃಶ್ಯ ಕಂಡ ಯುವಕರು ಸಮಯಪ್ರಜ್ಞೆಯಿಂದ ಸಾಹಸ ಮೆರೆದು ಅದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಸವ ಸಾಗರ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕೃಷ್ಣ ನದಿಗೆ ಸುಮಾರು 6 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. ಹೀಗಾಗಿ ಜಿಲ್ಲೆಯಾದ್ಯಂತ ಗ್ರಾಮಸ್ಥರು ಪರಿಹಾರ ಕೆಂದ್ರಗಳಿಗೆ ಸ್ಥಳಾಂತರವಾಗಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಶಹಾಪುರ ತಾಲೂಕಿನ ಕೋಳೂರು ಗ್ರಾಮವು ಮುಳುಗಡೆಯಾಗುವ ಸಾಧ್ಯತೆಯಿದ್ದು, ಗ್ರಾಮಸ್ಥರೆಲ್ಲ ಗಂಜಿ ಕೇಂದ್ರಗಳಿಗೆ ತೆರಳಿದ್ದಾರೆ. ಆದ್ರೆ ಕುದುರೆಯೊಂದು ಕೃಷ್ಣ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಕುದುರೆಯನ್ನು ಸಂತ್ರಸ್ತ ಯುವಕರು ರಕ್ಷಿಸಿದ್ದಾರೆ.