ETV Bharat / state

ಯಾದಗಿರಿಯಲ್ಲಿ ಮತ್ತೆ ಐದು ಕೊರೊನಾ ಪ್ರಕರಣ : 290ಕ್ಕೇರಿಕೆಯಾದ ಸೋಂಕಿತರ ಸಂಖ್ಯೆ - yadagiri news

40 ವರ್ಷದ ಪುರುಷ (ಪಿ-3465), 18 ವರ್ಷದ ಯುವತಿ (ಪಿ-3466), 19 ವರ್ಷದ ಯುವತಿ (ಪಿ-3467), 21 ವರ್ಷದ ಪುರುಷ (ಪಿ-3468), 28 ವರ್ಷದ ಪುರುಷ (ಪಿ-3469) ಕೊರೊನಾ ಸೋಂಕಿಗೊಳಗಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 290ಕ್ಕೆ ಏರಿಕೆಯಾಗಿದೆ.

Five corona positive case found in Yadagiri
ಯಾದಗಿರಿಯಲ್ಲಿ ಮತ್ತೇ 5 ಕೊರೊನಾ ಪ್ರಕರಣ
author img

By

Published : Jun 3, 2020, 6:33 AM IST

ಯಾದಗಿರಿ: ಜಿಲ್ಲೆಯಲ್ಲಿ ಮತ್ತೆ 5 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 290ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 290 ಪ್ರಕರಣಗಳ ಪೈಕಿ ಇಲ್ಲಿಯವರೆಗೆ 28 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇನ್ನು 40 ವರ್ಷದ ಪುರುಷ (ಪಿ-3465), 18 ವರ್ಷದ ಯುವತಿ (ಪಿ-3466), 19 ವರ್ಷದ ಯುವತಿ (ಪಿ-3467), 21 ವರ್ಷದ ಪುರುಷ (ಪಿ-3468), 28 ವರ್ಷದ ಪುರುಷ (ಪಿ-3469) ಕೊರೊನಾ ಸೋಂಕಿಗೊಳಗಾಗಿದ್ದಾರೆ.

ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈನಿಂದ ಯಾದಗಿರಿಗೆ ಮೇ 12, 14 ಮತ್ತು 18ರಂದು ಹಿಂದಿರುಗಿದ್ದರು. ಪ್ರಕರಣ ಸಂಖ್ಯೆ ಪಿ-3469 ವ್ಯಕ್ತಿಯನ್ನು ಅಲ್ಲಿಪುರ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಉಳಿದ 4 ಜನರನ್ನು ಗುರುಮಠಕಲ್‍ ಪಟ್ಟಣದ ಎಸ್.ಟಿ ಹಾಸ್ಟೆಲ್ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು. ಈ ಐವರಲ್ಲಿ ಕೊರೊನಾ ಸೊಂಕು ಪತ್ತೆಯಾದ ಹಿನ್ನೆಲೆ ಇವರನ್ನೆಲ್ಲ ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ನೂತನ ಜಿಲ್ಲಾಸ್ಪತ್ರೆಯ ಕೋವಿಡ್-19 ವಾರ್ಡ್​ಗೆ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.