ಯಾದಗಿರಿ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ರೈತ ಬೆಳೆದ ಲಕ್ಷಾಂತರ ರೂ. ಬೆಲೆ ಬಾಳುವ ಹತ್ತಿ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸೋಮರಯ್ಯ ಎಂಬುವ ರೈತ ತಮ್ಮ ಜಮೀನಿನಲ್ಲಿನ ಹತ್ತಿ ಬಿಡಿಸಿಕೊಂಡು ಮನೆಯ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದರು. ಇಂದು ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸುಮಾರು 20 ಕ್ವಿಂಟಲ್ ಹತ್ತಿ ಸುಟ್ಟು ಹಾನಿಯಾಗಿದೆ. ನಂತರ ಸ್ಥಳೀಯರಿಂದ ಬೆಂಕಿ ನಂದಿಸಲಾಗಿದೆ.
ಶಹಪುರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ರೈತನದಾಗಿದೆ.