ETV Bharat / state

ಸುರಪುರ: ಮರು ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು.... ಪ್ರತಿಭಟನೆಗೆ ನಿಂತ ಕಾಂಗ್ರೆಸ್ಸಿಗರು!

ಮರು ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇದನ್ನು ಖಂಡಿಸಿದ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿ ಪಕ್ಷದವರು ಪ್ರತಿಭಟನೆ ನಡೆಸಿದರು.

fight in vote counting center at surapura
ಸುರಪುರ: ಮರು ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು....ಕಾಂಗ್ರೆಸಿಗರ ಅಸಮಧಾನ
author img

By

Published : Dec 31, 2020, 9:13 AM IST

ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮ ಪಂಚಾಯತ್​​ ಸ್ಥಾನವೊಂದರ ಮತ ಎಣಿಕೆ ಗೊಂದಲದಿಂದಾಗಿ ಸಹಾಯಕ ಚುನಾವಣಾಧಿಕಾರಿ ಅವರೊಂದಿಗೆ ಮುಂಜಾನೆ 3:00 ವೇಳೆಗೆ ವಾಗ್ವಾದ ನಡೆದಿದೆ.

ನಗರದ ಶ್ರೀ ಪ್ರಭು ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಪೇಠ ಅಮ್ಮಾಪುರ ಗ್ರಾಮದ ಒಂದು ಸ್ಥಾನಕ್ಕೆ ಬೆಳಗ್ಗೆ ನಡೆದ ಮತ ಎಣಿಕೆಯಲ್ಲಿ ಇಬ್ಬರು ಅಭ್ಯರ್ಥಿಗಳು ಸಮಾನ ಮತಗಳನ್ನು ಪಡೆದಿರುವ ಬಗ್ಗೆ ಅಧಿಕಾರಿಗಳು ಘೋಷಣೆ ಮಾಡಿದ್ದರು. ಇದನ್ನು ಒಪ್ಪದ ಎರಡೂ ಕಡೆಯ ಅಭ್ಯರ್ಥಿಗಳು ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿದರು. ಇದರಿಂದಾಗಿ ಮರು ಮತ ಎಣಿಕೆಗೆ ಮನವಿಯನ್ನು ಕೂಡ ಸಲ್ಲಿಸಲಾಯಿತು. ನಂತರ ರಾತ್ರಿ ಆರಂಭಗೊಂಡ ಮರು ಮತಎಣಿಕೆಯು ತಡರಾತ್ರಿ 2 ಗಂಟೆವರೆಗೂ ನಡೆಸಲಾಯಿತು. 2.00 ವರೆಗೆ ನಡೆದ ಮರು ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ 5 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಮತ ಎಣಿಕೆ ಕೇಂದ್ರದಲ್ಲಿ ವಾಗ್ವಾದ

5 ಮತಗಳ ಅಂತರದಿಂದ ಗೆಲುವು ಸಾಧಿಸಿದ ಅಭ್ಯರ್ಥಿಯ ಫಲಿತಾಂಶ ಘೋಷಿಸಿ ಪ್ರಮಾಣ ಪತ್ರವನ್ನು ನೀಡಿ ಕಳುಹಿಸಲಾಯಿತು. ಎಲ್ಲಾ ಪ್ರಕ್ರಿಯೆ ಮುಗಿದ ನಂತರ ರಾತ್ರಿ 3 ಗಂಟೆ ವೇಳೆಗೆ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಗ್ರಾಮ ಪಂಚಾಯತ್​​ ಚುನಾವಣಾಧಿಕಾರಿಗಳಾದ ಲಾಲ್‌ಸಾಬ್ ಅವರನ್ನು ಪ್ರಶ್ನಿಸಲು ಆರಂಭಿಸಿದರು. ಮೊದಲು ಎರಡು ಕಡೆಗೆ ಸಮಾನವಾದ ಮತಗಳು ಬಂದಿವೆ ಎಂದು ಹೇಳಿ ಇದೀಗ ಐದು ಮತಗಳು ವ್ಯತ್ಯಾಸ ಹೇಗೆ ಆಯಿತು ಎನ್ನುವ ಬಗ್ಗೆ ನೀವು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಈ ಸುದ್ದಿಯನ್ನೂ ಓದಿ: ಎಣಿಕೆ ಕೇಂದ್ರದ ಬಳಿ ಸೇರಿದ ಜನರ ಮೇಲೆ ಲಘು ಲಾಠಿ ಪ್ರಹಾರ

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತು ಮಧ್ಯ ಪ್ರವೇಶಿಸಿದ ಪೊಲೀಸ್ ಇನ್ಸ್​​ಪೆಕ್ಟರ್​​​ ಎಸ್.ಎಮ್. ಪಾಟೀಲ್ ಅವರು ಮತ ಎಣಿಕೆ ಕೇಂದ್ರದ ಒಳಗಡೆ ಅಭ್ಯರ್ಥಿಗಳು ಅಥವಾ ಏಜೆಂಟರನ್ನು ಹೊರತುಪಡಿಸಿ ಬೇರೆಯವರಿಗೆ ಅವಕಾಶವಿಲ್ಲ. ಇಷ್ಟೊಂದು ಜನರು ಬಂದು ವಾಗ್ವಾದ ಮಾಡಲು ಅವಕಾಶ ಕೊಡುವುದಿಲ್ಲ. ಈ ಕೂಡಲೇ ತಾವೆಲ್ಲರೂ ತೆರಳುವಂತೆ ಸೂಚನೆ ನೀಡಿದರು. ಆದರೂ ನೊಂದ ಅಭ್ಯರ್ಥಿಗಳ ಬೆಂಬಲಿಗರು ಅಧಿಕಾರಿಗಳೊಂದಿಗೆ ವಾಗ್ವಾದ ಮುಂದುವರೆಸಿದಾಗ ಪಿಎಸ್​ಐ ಎಸ್.ಎಮ್. ಪಾಟೀಲ್ ಅವರು ಇಲ್ಲಿ ಯಾವುದೇ ರೀತಿಯ ವಿವಾದ, ಗದ್ದಲ ಮಾಡುವಂತಿಲ್ಲ. ನಿಮ್ಮದೇನೇ ಬೇಡಿಕೆ ಇದ್ದರೂ ಕೂಡ ಅದನ್ನು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಅಥವಾ ನ್ಯಾಯಾಲಯದ ಮೊರೆ ಹೋಗುವಂತೆ ತಿಳಿಸಿ ಎಲ್ಲರನ್ನು ಚದುರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.