ETV Bharat / state

ಸರ್ಕಾರ ಪತನವಾದರೆ ಹೈಕಮಾಂಡ್​​ ಮುಂದಿನ ಕ್ರಮಕೈಗೊಳ್ಳುತ್ತೆ: ಖಂಡ್ರೆ

author img

By

Published : May 29, 2020, 5:57 PM IST

ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಕುರಿತು ನಮ್ಮ ಹೈ ಕಮಾಂಡ್​ ಗಮನಿಸುತ್ತಿದೆ. ಇದರ ಬಗ್ಗೆ ನಮ್ಮ ಹೈ ಕಮಾಂಡ್​ ಇಂದು ನಿರ್ಣಯ ಕೈಗೊಳ್ಳಲಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

eshwar-khandre
ಈಶ್ವರ ಖಂಡ್ರೆ

ಯಾದಗಿರಿ: ಬೆಂಗಳೂರಿನಲ್ಲಿ ನಡೆದಂತಹ ಬಿಜೆಪಿಯ ಅತೃಪ್ತರ ಶಾಸಕರ ಸಭೆಯ ಹೈಡ್ರಾಮಾ ಕುರಿತು ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಕುರಿತು ನಮ್ಮ ಹೈ ಕಮಾಂಡ್​ ಗಮನಿಸುತ್ತಿದೆ ಇದರ ಬಗ್ಗೆ ನಮ್ಮ ಹೈ ಕಮಾಂಡ್​ ಇಂದು ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸರ್ಕಾರ ಪತನವಾದರೆ ಜನರ ಹಿತದೃಷ್ಟಿಯಿಂದ ನಮ್ಮ ಹೈಕಮಾಂಡ್ ಮುಂದಿನ ನಿರ್ಣಯ ಕೈಗೊಳ್ಳಲಿದೆ: ಖಂಡ್ರೆ

ಕೆಪಿಸಿಸಿ ನೂತನ ಅಧ್ಯಕ್ಷ ಪದಗ್ರಹಣ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಲು ಯಾದಗಿರಿಗೆ ಆಗಮಿಸಿದಂತಹ ವೇಳೆ ಪ್ರತಿಕ್ರಿಯೆ ನೀಡಿದ ಅವರು ಒಂದು ವೇಳೆ ಸರ್ಕಾರ ತನ್ನ ವೈಫಲ್ಯದಿಂದ ಪತನವಾದರೆ, ರಾಜ್ಯದ ಜನರ ಹಿತದೃಷ್ಟಿಯಿಂದ ನಮ್ಮ ಹೈ ಕಮಾಂಡ್ ಮುಂದಿನ ನಿರ್ಣಯವನ್ನ ಕೈಗೊಳ್ಳುತ್ತೆ ಅಂತ ಹೇಳಿಕೆ ನೀಡುವ ಮೂಲಕ ಬಿಜೆಪಿಯ ಭಿನ್ನಮತ ಸ್ಫೋಟದಿಂದ ಅಧಿಕಾರ ಕಳೆದುಕೊಂಡರೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಗೆ ಮುಂದಾಗಲಿದೆ ಎಂದು ತಿಳಿಸಿದ್ದಾರೆ.

ಇನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಶಾಸಕ ಉಮೇಶ್ ಕತ್ತಿ ಭೇಟಿ ವಿಚಾರವಾಗಿ ಮಾತನಾಡಿದ ಅವರು ಉಮೇಶ್ ಕತ್ತಿ ನಿನ್ನೆ ನನಗೂ ಕೂಡ ಭೇಟಿ ಆಗಿದ್ದಾರೆ. ಸ್ನೇಹಿತರಿದ್ದಾರೆ ಭೇಟಿ ಆಗಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಸ್ಪಷ್ಟನೆ ನೀಡಿದರು. ಹಾಗೆ ಬಿಜೆಪಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರದಿಂದ ಉತ್ತರ ಮತ್ತು ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಇದನ್ನ ಸರಿಪಡಿಸಬೇಕು ಅನ್ನೋದು ನಮ್ಮೆಲ್ಲರ ಆಗ್ರಹವಾಗಿದೆ ಎಂದರು.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ಅವರ ಪಕ್ಷದ ಆಂತರಿಕ ವಿಚಾರ ಇದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಅಂತ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.