ETV Bharat / state

ಸುರಪುರ : ಡಿವೈಎಸ್‌ಪಿ ಡಾ. ಬಿ. ದೇವರಾಜ್ ಮುಖ್ಯಮಂತ್ರಿ ಪದಕ ಪ್ರದಾನ - DYSP Dr. B. Devaraj

ಡಿವೈಎಸ್‌ಪಿ ಡಾ. ಬಿ. ದೇವರಾಜ್ ಅವರು ಗಮನಾರ್ಹ ಸೇವೆ ಸಲ್ಲಿಸಿರುವುದಕ್ಕೆ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಪೊಲೀಸ್ ದ್ವಜ ದಿನಾಚರಣೆ ಅಂಗವಾಗಿ ಬೆಂಗಳೂರಿನ ಕೋರಮಂಗಲ ಪೊಲೀಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪದಕ ಪ್ರದಾನ ಮಾಡಿದರು.

dysp-dr-b-devaraj-awarded-the-cm-medal
ಸುರಪುರ : ಡಿವೈಎಸ್‌ಪಿ ಡಾ. ಬಿ. ದೇವರಾಜ್ ಮುಖ್ಯಮಂತ್ರಿ ಪದಕ ಪ್ರದಾನ
author img

By

Published : Apr 2, 2022, 1:29 PM IST

ಯಾದಗಿರಿ: ಡಿವೈಎಸ್‌ಪಿ ಡಾ. ಬಿ. ದೇವರಾಜ್ ಅವರು ಗಮನಾರ್ಹ ಸೇವೆ ಸಲ್ಲಿಸಿರುವುದಕ್ಕೆ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಪೊಲೀಸ್ ದ್ವಜ ದಿನಾಚರಣೆ ಅಂಗವಾಗಿ ಬೆಂಗಳೂರಿನ ಕೋರಮಂಗಲ ಪೊಲೀಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪದಕ ಪ್ರದಾನ ಮಾಡಿದ್ದಾರೆ.

ಕೂಡ್ಲಗಿ ತಾಲೂಕಿನ ಚಿಕ್ಕಜೋಗಿ ಹಳ್ಳಿಯ ತಾಂಡಾದವರಾದ ದೇವರಾಜ್ ಅವರು ಪಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2014ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಡಿವೈಎಸ್‌ಪಿ ಹುದ್ದೆ ಗಿಟ್ಟಿಸಿಕೊಂಡಿದ್ದರು. 2017ರಲ್ಲಿ ಸರ್ಕಾರದಿಂದ ನೇಮಕಾತಿ ಪತ್ರ ದೊರೆತು ಎರಡು ವರ್ಷ ತರಬೇತಿ ಮುಗಿಸಿದರು. ಬಳಿಕ 2020ರ ಜನವರಿಯಲ್ಲಿ ಭಾಲ್ಕಿ ಡಿವೈಎಸ್‌ ಪಿಯಾಗಿ ಸೇವೆ ಸಲ್ಲಿಸಿದರು.

ಹಲವು ಪ್ರಕರಣಗಳನ್ನು ಭೇದಿಸಿರುವ ಇವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ದೊಡ್ಡ ಡಕಾಯಿತಿ ಪ್ರಕರಣ, ತಂದೆ ತಾಯಿಯೇ ತಮ್ಮ ಮಗಳನ್ನು ಕೊಲೆ ಮಾಡಿದ ಪ್ರಕರಣ, 1,000 ಕೆಜಿ ಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ ಪ್ರಕರಣ ಸೇರಿ ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.

ಅತಿಕ್ರಮಗೊಂಡಿದ್ದ ಪೊಲೀಸ್ ಇಲಾಖೆಯ 14 ಜಾಗಗಳನ್ನು ವಶಪಡಿಸಿಕೊಂಡು 3 ಸ್ಥಳಗಳಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ಬೆಳೆದಿದ್ದು, ಹಿರಿಯ ಅಧಿಕಾರಿಗಳು ಮತ್ತು ಅಂದಿನ ಗೃಹ ಸಚಿವರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆದಿತ್ತು. ಇವರ ದಕ್ಷ ಮತ್ತು ಪ್ರಾಮಾಣಿಕ ಕರ್ತವ್ಯಕ್ಕೆ ರಾಜ್ಯ ಸರ್ಕಾರ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದ್ದು, ಸದ್ಯ ಡಾ. ದೇವರಾಜ್ ಅವರು ಸುರಪುರ ವಿಭಾಗ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಓದಿ : ಹೊನ್ನೇರು ಇದು ಅನ್ನದಾತರ ತೇರು.. ಯುಗಾದಿ ಸಡಗರದಲ್ಲಿ ರೈತರಿಂದ ಹೊನ್ನೇರು ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.