ಯಾದಗಿರಿ: ಕೊರೊನಾ ವೈರಸ್ ಭೀತಿಯಿಂದ ರಾಜ್ಯದಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ. ಆದರೆ ಜಿಲ್ಲೆಯ ಸುರಪುರದಲ್ಲಿ ತರಕಾರಿ ವ್ಯಾಪಾರಿಗಳು ದಿನನಿತ್ಯದ ವ್ಯಾಪಾರದಲ್ಲಿ ತೊಡಗಿದ್ದಾರೆ.
ಸುರಪುರ ನಗರದ ತರಕಾರಿ ವ್ಯಾಪಾರಿಗಳು ಕಲಬುರಗಿಯಿಂದಲೇ ತರಕಾರಿ ತಂದು ನಗರದಲ್ಲಿ ಬೆಳ್ಳಂಬೆಳಗ್ಗೆ ಬೀದಿ ಬದಿಗಳಲ್ಲಿ ಹರಾಜು ಮಾಡುತ್ತಾ ವ್ಯಾಪಾರ ನಡೆಸಿದ್ದಾರೆ.
ಕೊರೊನಾದಿಂದ ಕಲಬುರಗಿಯಲ್ಲಿ ವ್ಯಕ್ತಿ ಮೃತಪಟ್ಟು ಆತನಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೂ ಸೋಂಕು ತಗುಲಿದ್ದರಿಂದ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು.