ಯಾದಗಿರಿ : ಬಡ ಕೂಲಿ ಕಾರ್ಮಿಕರು ಸೇರಿದಂತೆ ನಿರಾಶ್ರಿತರಿಗೆ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಜಿಲ್ಲಾ ಬಣಜಿಗ ಸಮಾಜದ ವತಿಯಿಂದ ಆಹಾರ ವಿತರಿಸಲಾಯಿತು. ಇದಕ್ಕೆ ಹಾಸ್ಯ ಕಲಾವಿದ ಬಸವರಾಜ ಮಾಮನಿ ಸಾಥ್ ನೀಡಿದರು.
ಭಾರತ ಲಾಕ್‌ಡೌನ್ ಹಿನ್ನೆಲೆ ದೇಶದಲ್ಲೆಡೆ ಕೂಲಿ ಕಾರ್ಮಿಕರು ಸೇರಿ ನಿರಾಶ್ರಿತರು ಒಂದು ಹೊತ್ತು ಊಟಕ್ಕಾಗಿ ಪರದಾಡುವ ಸ್ಥಿತಿಯಿದೆ. ಅನೇಕ ದಾನಿಗಳು ಆಹಾರ ಸೇರಿ ಅಗತ್ಯ ವಸ್ತುಗಳ ಪೂರೈಕೆಗೆ ಮುಂದಾಗಿದ್ದಾರೆ. ಅದರಂತೆ ಯಾದಗಿರಿಯಲ್ಲಿಂದು ಜಿಲ್ಲಾ ರೈತಸಂಘ, ಹಸಿರು ಸೇನೆ ಕಾರ್ಯಕರ್ತರು ಹಾಗೂ ಬಣಜಿಗ ಸಮಾಜದ ವತಿಯಿಂದ ನಗರದ ಹಲವು ಬಡಾವಣೆಗಳ ಗುಡಿಸಲಿನಲ್ಲಿ ವಾಸ ಮಾಡುವ ಬಡ ಜನರಿಗೆ ಆಹಾರ ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಮನಿ, ಕರೋನಾ ವೈರಸ್ ತೊಲಗಲು ಎಲ್ಲರೂ ಪ್ರಧಾನಿ ಹೇಳಿದಂತೆ ಕಡ್ಡಾಯವಾಗಿ ಲಾಕ್‌ಡೌನ್ ಪಾಲಿಸಬೇಕು ಮತ್ತು ಬಡ, ನಿರಾಶ್ರಿತರಿಗೆ ಆಹಾರ ಸೇರಿ ಅಗತ್ಯ ವಸ್ತುಗಳನ್ನ ನೀಡಲು ಎಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.