ETV Bharat / state

ಕೀಟನಾಶಕ ಸಿಂಪಡಿಸಿ ಬಾಡಿದ ಹತ್ತಿ ಬೆಳೆ: ಕಂಗಾಲಾದ ರೈತ - ಕಿಲ್ ಪ್ಲೇ ಕಂಪನಿ

ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಅನ್ನೋ ಗಾದೆ ಮಾತಿನಂತೆ ಖಾಸಗಿ ಕಂಪನಿವೊಂದರ ಕ್ರಿಮಿನಾಶಕವೀಗ ರೈತನ ಬೆಳೆ ಮೇಲೆ ಮಾರಕ ಪರಿಣಾಮ ಬೀರಿದೆ. ರೈತ ಗೊಲ್ಲಾಳಪ್ಪ ಬೆಳೆದ ಹತ್ತಿ ಬೆಳೆ ಕೈ ಸೇರುವ ಮುನ್ನವೇ ಕ್ರಿಮಿನಾಷಕ ಸಿಂಪಡಣೆಯಿಂದ ಬೆಳೆ ಸುಟ್ಟು ನಾಶವಾಗಿದೆ ಎಂದು ರೈತ ಆರೋಪಿಸಿದ್ದಾನೆ.

yadgiri cotton crop problem
ರೈತನ ಬದುಕನ್ನೇ ಕಿಲ್ ಮಾಡಿತಾ ಕಿಲ್ ಪ್ಲೇ ಕಂಪನಿ?
author img

By

Published : Oct 9, 2020, 7:02 AM IST

ಯಾದಗಿರಿ: ಉತ್ತಮ ಮಳೆಯಾಯಿತು, ಬೆಳೆಯೂ ಬೆಳೆಯಿತು. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಈ ವರ್ಷ ಸುರಿದ ಉತ್ತಮ ಮಳೆಯಿಂದ ಹತ್ತಿ ಬೆಳೆದು ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಬೆಳೆ ಕ್ರಿಮಿನಾಶಕ ಮಾರಕವಾಗಿ ಪರಿಣಮಿಸಿದೆ. ಸಾಕಷ್ಟು ಕಷ್ಟ ಪಟ್ಟು ಬೆಳೆದ ಹತ್ತಿ ಬೆಳೆಯೀಗ ಸಂಪೂರ್ಣ ಸುಟ್ಟು ಹೊಗಿದ್ದು, ರೈತನೋರ್ವ ಕಂಗಾಲಾಗಿದ್ದಾನೆ.

ಹೌದು, ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದ ರೈತ ಗೊಲ್ಲಾಳಪ್ಪ ಹತ್ತಿ ಬೆಳೆ ಬೆಳೆದು 2 ಲಕ್ಷ ರೂ.ಗೂ ಅಧಿಕ ಆದಾಯದ ನಿರೀಕ್ಷೆಯಲ್ಲಿದ್ದ. ಸಾಕಷ್ಟು ಕಷ್ಟ ಪಟ್ಟು ಬೆಳೆದ ಹತ್ತಿ ಬೆಳೆ ಈಗ ಸರ್ವನಾಶವಾಗಿದ್ದು, ರೈತನ ಕನಸು ನುಚ್ಚು ನೂರಾಗಿದೆ.

ರೈತ ಗೊಲ್ಲಾಳಪ್ಪ ಅವರ ಬೆಳೆ ಸಮಸ್ಯೆ

ರೈತ ಗೊಲ್ಲಾಳಪ್ಪ 4 ಎಕರೆ ಜಮೀನನ್ನು ಲೀಸ್​​ಗೆ ಪಡೆದು ಲಕ್ಷಾಂತರ ರೂ. ವ್ಯಯಿಸಿ ಉತ್ತಮ ಬೆಳೆ ಬೆಳೆದಿದ್ದ. ರೈತ ಬೆಳೆದ ಬೆಳೆಗೆ ಕೀಟಬಾಧೆ ಎದುರಾಗಿದ್ದು, ಖಾಸಗಿ ಕಂಪನಿಯೊಂದರ ಕ್ರಿಮಿನಾಶಕವನ್ನು ಗೊಲ್ಲಾಳಪ್ಪ ಹತ್ತಿ ಬೆಳೆಗೆ ಸಿಂಪಡಣೆ ಮಾಡಿದ್ದು, ಹತ್ತಿ ಬೆಳೆ ಸುಟ್ಟು ಬಾಡಿ ಹೋಗಿದೆ. ಹತ್ತಿ ಬೆಳೆ ಕೀಟಬಾಧೆಗೆ ಈ ಕ್ರಿಮಿನಾಶಕ ಉತ್ತಮವಾದದ್ದು ಅಂತ ಹೇಳಿ ಅಂಗಡಿ ಮಾಲೀಕ ಕೀಟನಾಶಕ ಸಿಂಪಡಣೆ ಮಾಡುವಂತೆ ನೀಡಿದ್ದ ಎಂದು ರೈತ ಗೊಲ್ಲಾಳಪ್ಪ ಆರೋಪಿಸಿದ್ದಾನೆ.

ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ತಾನು ಬೆಳೆದ ಹತ್ತಿ ಬೆಳೆ ನಷ್ಟವನ್ನು ಭರಿಸಿ ಕೊಡುವಂತಹ ಕೆಲಸವನ್ನು ಅಧಿಕಾರಿಗಳು ಮಾಡಬೇಕಿದೆ ಅಂತಾ ರೈತ ಗೊಲ್ಲಾಳಪ್ಪ ಕೃಷಿ ಅಧಿಕಾರಿಗಳಿಗೆ ದೂರು ನೀಡಿದ್ದಾನೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ದೇವಿಕಾ, ಈಗಾಗಲೇ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.