ETV Bharat / state

ಯಾದಗಿರಿಯಲ್ಲಿ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಮಹಿಳೆ ಸಾವು: ಆತ್ಮಹತ್ಯೆಯೋ? ಕೊಲೆಯೋ? - ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಜಗಳವಾದ ಬಳಿಕ ಸೀಮೆ ಎಣ್ಣೆ ಸುರಿದುಕೊಂಡು ಮಹಿಳೆ ತಾನೇ ಸುಟ್ಟುಕೊಂಡಿದ್ದಾಳೆ ಎಂದು ಪತಿ ಕುಟುಂಬಸ್ಥರು ಹೇಳಿದ್ದಾರೆ. ಕುಟುಂಬಸ್ಥರೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಶಂಕೆಯಿದೆ ಎಂದು ಮೃತಳ ಸಹೋದರ ಆರೋಪಿಸಿದ್ದಾರೆ.

suicide
suicide
author img

By

Published : Jul 29, 2021, 2:59 PM IST

ಗುರುಮಠಕಲ್ (ಯಾದರಗಿರಿ): ಪಟ್ಟಣದ ಮನೆಯೊಂದರಲ್ಲಿ ಪತಿ, ಅತ್ತೆ, ಮಾವ ಹಾಗೂ ಮೈದುನರ ಕಿರುಕುಳ ತಾಳಲಾರದೆ ಸೀಮೆಎಣ್ಣೆ ಸುರಿದುಕೊಂಡು ಸುಟ್ಟುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ಜರುಗಿದೆ. ಮೃತರನ್ನು ಪಟ್ಟಣದ ಕಂದೂರುಗೇರಿ ಬಡಾವಣೆಯ ರಜಿತಾ (27) ಎಂದು ಗುರುತಿಸಲಾಗಿದೆ.

ನೆರೆಯ ತೆಲಂಗಾಣದ ಅಂಗಡಿ ರಾವುಲಪಲ್ಲಿ ಗ್ರಾಮದ ಭಾರತಮ್ಮ ಹಾಗೂ ಪಟ್ಟಣದ ಬೀರಪ್ಪ ಕುರುಬರು ಅವರಿಗೆ 8 ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಈ ದಂಪತಿಗೆ ಮೂವರು ಪುತ್ರಿಯರಿದ್ದಾರೆ. 'ಬರೀ ಹೆಣ್ಣು ಮಕ್ಕಳನ್ನು ಹೆತ್ತಿದ್ದಾಳೆ' ಎಂದು ಪತಿ ಬೀರಪ್ಪ, ಅತ್ತೆ ಸಾವಿತ್ರಮ್ಮ, ಮಾವ ಗ್ಯಾಂಗ್ ನಾಗಪ್ಪ ಹಾಗೂ ಮೈದುನ ಸೇರಿ ರಜಿತಾರಿಗೆ ಸದಾ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಮಂಗಳವಾರವೂ ಜಗಳವಾಗಿದ್ದು, ಸೀಮೆ ಎಣ್ಣೆ ಸುರಿದುಕೊಂಡು ರಜಿತಾ ಸುಟ್ಟುಕೊಂಡಿದ್ದಾಳೆ' ಎಂದು ಕುಟುಂಬಸ್ಥರು ಹೇಳಿದ್ದಾರೆ.

'ಅಕ್ಕ ರಜಿತಾಳಿಗೆ ಮೂವರು ಪುತ್ರಿಯರಿದ್ದಾರೆ. ಗಂಡು ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ಅವರ ಮನೆಯಲ್ಲಿ ಸದಾ ಕಿರುಕುಳ ನೀಡುತ್ತಿದ್ದರು. ಮಂಗಳವಾರ ರಾತ್ರಿಯೂ ಕಿರುಕುಳ ನೀಡಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಶಂಕೆಯಿದೆ' ಎಂದು ಮೃತಳ ಸಹೋದರ ಲಕ್ಷ್ಮೀಕಾಂತ ಕಂಡ್ರೆಪಲ್ಲಿ ತಿಳಿಸಿದರು.

ಘಟನೆ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.