ETV Bharat / state

ಪ್ರೀತಿ ಮಾಡಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ.. ನ್ಯಾಯ ಸಿಗದೆ ತಂದೆ ಅಲೆದಾಡ, ಮಲಗಿತಾ ಖಾಕಿ? - deadly assault on young man

ಕಳೆದ ವರ್ಷ 2019ರ ಡಿಸೆಂಬರ್ ತಿಂಗಳಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಆದರೆ, ನ್ಯಾಯಕ್ಕಾಗಿ ಯುವಕನ ತಂದೆ ಪ್ರತಿ ದಿನವೂ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ.

deadly assault
ಹಲ್ಲೆ
author img

By

Published : Jun 16, 2020, 5:59 PM IST

ಸುರಪುರ(ಯಾದಗಿರಿ) : ಸುರಪುರ ತಾಲೂಕಿನ ಅರಕೇರಾ ಜೆ ಗ್ರಾಮದ ವಿದ್ಯಾರ್ಥಿ ಮೇಲೆ ಕಲಬುರ್ಗಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹುಡುಗಿಯ ವಿಚಾರವಾಗಿ ಯುವಕನಿಗೆ ಮನಬಂದಂತೆ ಹಲ್ಲೆ ನಡೆಸಿದ ರಾಕ್ಷಸ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಯುವತಿ ವಿಚಾರವಾಗಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ..

ಅರಕೇರಾ ಗ್ರಾಮದ ಯುವಕ ಭೀಮನಗೌಡ ಪಾಟೀಲ್ ಎಂಬುವನು ಕಲಬುರ್ಗಿಯಲ್ಲಿ ಎಂಬಿಎ ಓದುತ್ತಿದ್ದ. ಅದೇ ತರಗತಿಯಲ್ಲಿದ್ದ ಯುವತಿಯನ್ನು ಪ್ರೀತಿಸುತ್ತಿದ್ದಿಯಾ ಎಂದು ಕಲಬುರ್ಗಿ ನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಕೆಲವು ದುಷ್ಟರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಯುವಕನ ಎರಡೂ ಕೈಗಳು ಮುರಿದಿವೆ. ಹಲ್ಲೆ ಎಸಗಿದವರ ವಿರುದ್ಧ ಭೀಮನಗೌಡನ ತಂದೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಳೆದ ವರ್ಷ 2019ರ ಡಿಸೆಂಬರ್ ತಿಂಗಳಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಆದರೆ, ನ್ಯಾಯಕ್ಕಾಗಿ ಯುವಕನ ತಂದೆ ಪ್ರತಿ ದಿನವೂ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ.

ಹಲ್ಲೆ ಮಾಡಿದ ಗೂಂಡಾಗಳನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಯುವಕ‌ನ ತಂದೆ ಶಾಂತಗೌಡ ಪೊಲೀಸರಲ್ಲಿ ಮನವಿ ಮಾಡುತ್ತಿದ್ದಾರೆ. ಯುವಕನ ಮೇಲೆ ಹಲ್ಲೆ ನಡೆಸಿದ ದೃಶ್ಯ ಈಗ ಎಲ್ಲೆಡೆ ವೈರಲ್​ ಆಗಿದ್ದು, ದುಷ್ಟರ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.