ಗುರುಮಠಕಲ್ (ಯಾದಗಿರಿ): ಕೊರೊನಾ ಪಾಸಿಟಿವ್ ಹಿನ್ನೆಲೆ ಪಿಎಸ್ಐ ಸೇರಿದಂತೆ 16 ಪೊಲೀಸರಿಗೆ ಕೋವಿಡ್ ಆಸ್ಪತ್ರೆಗೆ ತೆರಳಬೇಕಾಗಿತ್ತು. ಆದ್ರೆ ಆಸ್ಪತ್ರೆಗೆ ಹೋಗುವ ಮುನ್ನ ಅಧಿಕಾರಿ ಸೇರಿದಂತೆ ಸಿಬ್ಬಂದಿ ಸಹ ನಿರ್ಲಕ್ಷ್ಯ ತೋರಿರುವ ಘಟನೆ ಗುರುಮಠಕಲ್ ಪಟ್ಟಣದಲ್ಲಿ ನಡೆದಿದೆ.
ನಿನ್ನೆ ಗುರುಮಠಕಲ್ ಪಿಎಸ್ಐ ಸೇರಿದಂತೆ 16 ಪೊಲೀಸ್ ಸಿಬ್ಬಂದಿಗೆ ಕೊರೊನಾ ಧೃಡಪಟ್ಟಿದೆ. ಈಗಾಗಲೇ ಠಾಣೆಯನ್ನು ಸೀಲ್ ಡೌನ್ ಸಹ ಮಾಡಲಾಗಿದೆ. ಹೀಗಾಗಿ ಸಿಬ್ಬಂದಿಯನ್ನು ಕೋವಿಡ್ ಆಸ್ಪತ್ರೆಗೆ ಕರೆತರಲು ಸರ್ಕಾರಿ ಬಸ್ ಗುರುಮಠಕಲ್ ಪಟ್ಟಣಕ್ಕೆ ತೆರಳಿತ್ತು.
ಪಟ್ಟಣ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಎದುರು ಬಸ್ ನಿಂತಿದ್ದ ವೇಳೆ ಪೊಲೀಸರೆಲ್ಲರೂ ಬಸ್ ಪಕ್ಕದಲ್ಲಿದ್ದ ಟೀ ಅಂಗಡಿಗೆ ತೆರಳಿದ್ದಾರೆ. ತಮಗೆ ಕೊರೊನಾ ದೃಢಪಟ್ಟಿರುವುದು ಮರೆತು ಕೆಲ ಹೊತ್ತು ಟೀ ಕುಡಿಯುತ್ತಾ ಹರಟೆ ಹೊಡೆದಿದ್ದಾರೆ.
ಈ ಘಟನೆ ಪೊಲೀಸರ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಕನ್ನಡಿಯಾಗಿದೆ. ಪೊಲೀಸರ ನಡೆಗೆ ಜಿಲ್ಲೆಯಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.