ಯಾದಗಿರಿ: ಈಶಾನ್ಯ ವಲಯ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆ ಸಭೆಯಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿದ ಸಚಿವ ಕೆ.ಎಸ್. ಈಶ್ವರಪ್ಪಯಿಂದಲೇ ಸಾಮಾಜಿಕ ಅಂತರದ ಉಲ್ಲಂಘನೆಯಾಗಿದೆ. ಅಲ್ಲದೆ ಸಭೆಯಲ್ಲಿ ಹಲವಾರು ಮಂದಿ ಮಾಸ್ಕ್ ಧರಿಸದೇ ಇರುವುದು ಕಂಡುಬಂದಿದೆ.
ಕೊರೊನಾ ಹಿನ್ನೆಲೆ ಮಾಸ್ಕ್ ಧರಿಸದವರಿಗೆ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳದವರಿಗೆ ಸರ್ಕಾರದಿಂದ ದಂಡ ವಿಧಿಸಲಾಗುತ್ತಿದ್ದು, ಮಂತ್ರಿಗಳೇ ದೈಹಿಕ ಅಂತರ ಮರೆತರೆ ದಂಡ ಹಾಕೋರು ಯಾರು ಅಂತ ಸಾರ್ವಜನಿಕ ವಲಯದಲ್ಲಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತವಾಗಿವೆ. ಸಭೆಗೆ ಆಗಮಿಸಿದ ಸಚಿವರ ಸುತ್ತಲೂ ನೂರಾರು ಮಂದಿ ನೆರೆದಿದ್ದು, ಕೊರೊನಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿತ್ತು.
ಇನ್ನು ರಾಜ್ಯದಲ್ಲಿ ನಾಗರಿಕರಿಗೆ ಒಂದು ನ್ಯಾಯ, ಜನಪ್ರತಿನಿಧಿಗಳಿಗೆ ಇನ್ನೊಂದು ನ್ಯಾಯವಾ..? ಅಂತ ನೆರೆದಿದ್ದ ಸಾರ್ವಜನಿಕರು ಪ್ರಶ್ನಿಸಿದ್ದಾರೆ.