ETV Bharat / state

ಕೊರೊನಾ ತಡೆಗೆ ಸಹಕರಿಸಲು ಸಚಿವ ಶ್ರೀರಾಮುಲು ಮನವಿ - corona confirmed cases

ಜಾತಿ, ಧರ್ಮಗಳಾಚೆಗೆ ನಾವು ಚಿಂತಿಸಬೇಕು. ಕೊರೊನಾ ಸೋಂಕಿತರು ವೈದ್ಯರ ಸೂಚನೆಗಳನ್ನು ಪಾಲಿಸಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದರು.

corona positive cases in yadagiri
ಕೊರೊನಾ ತಡೆಗೆ ಸಹಕರಿಸಲು ಶ್ರೀರಾಮುಲು ಮನವಿ
author img

By

Published : Apr 5, 2020, 10:38 PM IST

ಯಾದಗಿರಿ: ದೆಹಲಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮರಳಿದವರು ವೈದ್ಯರ ಸೂಚನೆಗಳನ್ನು ಪಾಲಿಸುವಂತೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದರು.

corona positive cases in yadagiri
ಕೊರೊನಾ ತಡೆಗೆ ಸಹಕರಿಸಲು ಶ್ರೀರಾಮುಲು ಮನವಿ

ಕೊರೊನಾ ಸೋಂಕಿನಿಂದ ಜನ ಭಯ ಪಡುವ ಅವಶ್ಯಕತೆ ಇಲ್ಲ. ಈಗಾಗಲೇ ರಾಜ್ಯದ ಎಲ್ಲೆಡೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ವೈರಸ್ ಬಗ್ಗೆ ಜನಜಾಗೃತಿಗಾಗಿ ಜಾಗೃತಿ ಕರ್ನಾಟಕ ಯುಟೂಬ್ ಚಾನೆಲ್​ ಆರಂಭ ಮಾಡಲಾಗಿದೆ. ಇದರಿಂದ ರಾಜ್ಯದ ಜನರಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಅರಿವು ಮೂಡಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಮಾತ್​ನಲ್ಲಿ ಸಾಮೂಹಿಕ ಪ್ರಾರ್ಥನೆ ಮುಗಿಸಿಕೊಂಡು ಬಂದವರು ಬೆಳಗಾವಿ, ಬೀದರ್​ನಲ್ಲಿ ಕ್ವಾರಂಟೈನ್​ನಲ್ಲಿ ಇದ್ದಾರೆ. ದಯವಿಟ್ಟಿ ಸೋಂಕಿತರು ಅಸಭ್ಯವಾಗಿ ವರ್ತಿಸಬಾರದು. ಕ್ವಾರಂಟೈನ್​ನಲ್ಲಿ ಇದ್ದವರು ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದರು.

ಲಾಕ್​ಡೌನ್​ನಿಂದ ಸಾಕಷ್ಟು ಹಾನಿಯಾಗಿದೆ. ಆದರೂ ಸರ್ಕಾರ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.