ETV Bharat / state

ಸುರಪುರದಲ್ಲಿ ‘ಕೊರೊನಾ ವಾರಿಯರ್ಸ್​’ಗೆ ಸನ್ಮಾನ.. - ಯಾದಗಿರಿಯಲ್ಲಿ ಕೊರೊನಾ ಸೋಂಕಿನ ಸೆಣಸಾಟ

ಕೊರೊನಾ ವಿರುದ್ಧ ಸೆಣಸಾಡುತ್ತಿರುವ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಜಿಲ್ಲಾ ಪಂಚಾಯತ್‌ ಸದಸ್ಯ ಬಸವರಾಜ ಸ್ವಾಮಿ ಸನ್ಮಾನಿಸಿದರು.

congratulations-to-the-crew-who-fought-corona
ಸುರಪುರದಲ್ಲಿ ‘ಕೊರೊನಾ ವಾರಿಯರ್ಸ್​’ಗೆ ಸನ್ಮಾನ
author img

By

Published : May 3, 2020, 6:28 PM IST

ಸುರಪುರ : ಜಿಲ್ಲಾ ಪಂಚಾಯತ್‌ ಸದಸ್ಯ ಬಸವರಾಜ ಸ್ವಾಮಿ ಕೋವಿಡ್-19 ಸೋಂಕು ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸನ್ಮಾನಿಸಿದರು.

ಸುರಪುರದಲ್ಲಿ ‘ಕೊರೊನಾ ವಾರಿಯರ್ಸ್​’ಗೆ ಸನ್ಮಾನ..

ನಗರದ ಪೊಲೀಸ್ ಠಾಣೆಯಲ್ಲಿನ ಎಲ್ಲಾ ಸಿಬ್ಬಂದಿಗೆ ಹಾಗೂ ತಹಶೀಲ್ದಾರ್ ವಿನಯ್ ಪಾಟೀಲ್ ಮತ್ತು ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ, ಗ್ರಾಮ ಪಂಚಾಯತ್‌ ಸಿಬ್ಬಂದಿಗೂ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಸ್ವಾಮಿ ಸ್ಥಾವರಮಠ, ಇಂದು ನಾವೆಲ್ಲರೂ ಕೊರೊನಾದಿಂದ ರಕ್ಷಣೆ ಪಡೆಯಲು ಎಲ್ಲಾ ಇಲಾಖೆಯ ಪರಿಶ್ರಮ ದೊಡ್ಡದು. ಅವರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಭೀಮಣ್ಣ ಚೌಹಾಣ್, ತಾರಾನಾಥ್ ಚೌಹಾಣ್ ಸಿಬ್ಬಂದಿಗೆ ಹಣ್ಣು ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ವಿನಯ್ ಪಾಟೀಲ್, ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಅಂಬರೇಶ್​, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕಿ ಮಧುಮತಿ ಬ್ಯಾಕೋಡ ,ಆನಂದ ಬಾರಿಗಿಡದ ಇದ್ದರು.

ಕೋವಾಡ್-19 ನಿರ್ಮೂಲನೆಗೆ ಹಗಲಿರುಳು ಜೀವದ ಹಂಗು ತೊರೆದು ಶ್ರಮಿಸುವವರಿಗೆ ಸನ್ಮಾನಿಸಿ ಗೌರವಿಸಿದ ಬಸವರಾಜ ಸ್ವಾಮಿ ಸ್ಥಾವರಮಠರ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.