ಯಾದಗಿರಿ: ಜಿಲ್ಲೆಯ ರಾಮಸಮುದ್ರ ಗ್ರಾಮದಲ್ಲಿ ಚರಂಡಿ ನೀರು ಸ್ವಚ್ಛತೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ.
ರಾಮಸಮುದ್ರ ಗ್ರಾಮದ ಸಹದೇವಪ್ಪನ ಮನೆ ಮುಂಭಾಗ ಚರಂಡಿ ನೀರು ಸಂಗ್ರಹವಾಗಿ ತೀವ್ರ ಸಮಸ್ಯೆಯುಂಟಾಗಿತ್ತು. ಚರಂಡಿ ನೀರು ಸ್ವಚ್ಛತೆ ಮಾಡಿಸುವಂತೆ ಸಹದೇವಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಹಾದೇವಮ್ಮ ಅವರಿಗೆ ತಿಳಿಸಿದ್ದ. ಇದರಿಂದ ಆಕ್ರೋಶಗೊಂಡ ಮಹಾದೇವಮ್ಮ ಕುಟುಂಬಸ್ಥರು, ಸಹದೇವಪ್ಪ ಕುಟುಂಬಸ್ಥರ ಮೇಲೆ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.