ETV Bharat / state

ಯಾದಗಿರಿ : ಸಂಭ್ರಮದ ಚರಬಸವೇಶ್ವರ ರಥೋತ್ಸವ - ಯಾದಗಿರಿಯಲ್ಲಿ ಸಂಭ್ರಮದ ಚರಬಸವೇಶ್ವರ ರಥೋತ್ಸವ

ಸಗರನಾಡಿನ ಆರಾಧ್ಯ ದೈವ ಶ್ರೀ ಚರಬಸವೇಶ್ವರರ 100 ನೇ ವರ್ಷದ ಮಹಾ ರಥೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗಿದೆ. ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

charabasaveshwara-chariot-festival-in-yadagiri
ಯಾದಗಿರಿ : ಸಂಭ್ರಮದ ಚರಬಸವೇಶ್ವರ ರಥೋತ್ಸವ
author img

By

Published : Apr 7, 2022, 1:32 PM IST

Updated : Apr 7, 2022, 2:19 PM IST

ಯಾದಗಿರಿ : ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದ ಜಾತ್ರೆ, ಉತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿತ್ತು. ಈ ವರ್ಷ ಇಲ್ಲಿನ ಸಗರನಾಡಿನ ಆರಾಧ್ಯ ದೈವ ಶ್ರೀ ಚರಬಸವೇಶ್ವರರ 100 ನೇ ವರ್ಷದ ಮಹಾ ರಥೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗಿದೆ.

ಯಾದಗಿರಿಯಲ್ಲಿ ಸಂಭ್ರಮದ ಚರಬಸವೇಶ್ವರ ರಥೋತ್ಸವ

ರಥೋತ್ಸವಕ್ಕೆ ಬಾಡಿಯಾಳ ಶ್ರೀಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ನೆರೆದಿದ್ದ ಭಕ್ತಾದಿಗಳು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆಗೈದಿದ್ದಾರೆ. ಇನ್ನು ಒಂದು ವಾರಗಳ ಕಾಲ ದೊಡ್ಡ ಪ್ರಮಾಣದ ಜಾನುವಾರು ಜಾತ್ರೆ ನಡೆಯಲಿದೆ ಎಂದು ತಿಳಿದುಬಂದಿದೆ.

ಜನರಿಗೆ ಉತ್ತಮ ಮಾರ್ಗದರ್ಶನ ನೀಡಿ, ಕಾಯಕ, ದಾಸೋಹ ತತ್ವ ಪ್ರತಿಪಾದಿಸಿದ್ದ, ಹಲವಾರು ಪವಾಡಗಳನ್ನು ಮೆರೆದಿದ್ದ ಚರಬಸವ ತಾತನ ಭಕ್ತರು ಆಯಾ ಗ್ರಾಮಗಳಿಂದ ತಾತನ ಬೆತ್ತ ಅಂದರೆ ಮಂತ್ರದಂಡವನ್ನು ಹೊತ್ತು ಮೆರವಣಿಗೆ, ಕಾಲ್ನಡಿಗೆ ಮೂಲಕ ರಥೋತ್ಸವಕ್ಕೆ ಆಗಮಿಸಿರುವುದು ವಿಶೇಷವಾಗಿತ್ತು.

ಓದಿ : ವಿಧಾನಸೌಧದಲ್ಲಿ ಶಾಸಕರ ಕಾರಿಗೆ ದಂಡ ವಿಧಿಸಿದ ಆರ್​ಟಿಒ ಅಧಿಕಾರಿಗಳು!

Last Updated : Apr 7, 2022, 2:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.