ಯಾದಗಿರಿ: ಕಾಂಗ್ರೆಸ್ ಪಕ್ಷ ಕಸದ ತರಹ, ಜೆಡಿಎಸ್ ಪಕ್ಷ ಜಾಲಿಗಿಡ ಇದಂತೆ. ಹೀಗೆ ಈ ಎರಡು ಕಸಗಳ ಪಕ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಈ ಎರಡು ಪಕ್ಷಗಳನ್ನೂ ಕಿತ್ತೆಸೆದು ಬಿಜೆಪಿಗೆ ಮತ ನೀಡಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಮಾಗನೂರ ಕರೆ ನೀಡಿದರು.
ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರವಾಗಿ ಪ್ರಚಾರ ನಡೆಸಿದ ಅವರು ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸುಳ್ಳಿನ ಪಕ್ಷ ಎಂದು ಆರೋಪಿಸುತ್ತಿದೆ. ಇದು ಶುದ್ಧ ಸುಳ್ಳು. ಬಿಜೆಪಿಯ ನಾಯಕರು ಯಾವುದೇ ಸಮಯದಲ್ಲೂ ಸುಳ್ಳು ಹೇಳುವುದಿಲ್ಲ ಎಂದು ಹೇಳಿದರು.
ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ್ಗೆ ಸೋಲಿನ ಭಯ ಉಂಟಾಗಿದೆ . ಹೀಗಾಗಿ ಯಾದಗಿರಿ, ಶಹಾಪುರ, ಸುರಪುರ ಕ್ಷೇತ್ರಗಳಲ್ಲಿ ಹೆಚ್ಚು ಮತ ಪ್ರಚಾರ ನಡೆಸುತ್ತಿದ್ದಾರೆ. ಆದರೂ ಕೂಡ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದರು.