ETV Bharat / state

ವಲಸೆ ಹೋದ ಕೂಲಿ ಕಾರ್ಮಿಕರನ್ನು ಕರೆ ತರಲು ಮನವಿ.. - Jaya Karnataka Organization

ಮುಂಬೈ, ಗೋವಾ, ಪುಣೆ ಗುಜರಾತ್ ಸೇರಿ ದೇಶದ​ ಮುಂತಾದ ಮಹಾನಗರಗಳಲ್ಲಿ ಸಿಲುಕಿಕೊಂಡಿರುವ ಕೂಲಿ ಕಾರ್ಮಿಕರು ಕೊರೊನಾ ಭೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ.

Gurumathkal
ಕೂಲಿ ಕಾರ್ಮಿಕರನ್ನು ಕರೆ ತರಲು ಮನವಿ ಪತ್ರ
author img

By

Published : May 7, 2020, 9:38 AM IST

ಗುರುಮಠಕಲ್ : ಹೊರ ರಾಜ್ಯಗಳಿಗೆ ವಲಸೆ ಹೋಗಿರುವ ತಾಲೂಕಿನ ಕೂಲಿ ಕಾರ್ಮಿಕರನ್ನು ಕರೆ ತರಬೇಕೆಂದು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ನಾಗೇಶ ಗದ್ದಿಗಿ ಮಾನ್ಯ ಮುಖ್ಯಮಂತ್ರಿಗಳಿಗೆ ತಾಲೂಕಿನ ತಹಶೀಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನ ಸಾವಿರಾರು ಜನ ಮಹಾನಗರಗಳಿಗೆ ಗೂಳೆ ಹೋಗಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಲಾಕ್​​ಡೌನ್​ ಬಳಿಕ ಅವರೆಲ್ಲರೂ ಸಂಕಷ್ಟಕ್ಕೀಡಾಗಿದ್ದಾರೆ. ಸದ್ಯ ಮುಂಬೈ, ಗೋವಾ, ಪುಣೆ ಗುಜರಾತ್ ಸೇರಿ ದೇಶದ​ ಮುಂತಾದ ಮಹಾನಗರಗಳಲ್ಲಿ ಸಿಲುಕಿಕೊಂಡಿರುವ ತಾಲೂಕಿನ ಕೂಲಿ ಕಾರ್ಮಿಕರು ಕೊರೊನಾ ಭೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗಿದೆ. ಇವರನ್ನು ತಕ್ಷಣ ತಾಲೂಕಿಗೆ ವಾಪಸು ಕರೆತರಬೇಕು. ಈ ವಿಷಯದಲ್ಲಿ ವಿಳಂಬ ಮಾಡದೇ ಸರ್ಕಾರ ತ್ವರಿತವಾಗಿ ತಾಲೂಕಿನ ಕೂಲಿ ಕಾರ್ಮಿಕರ ಹಿತ ಕಾಪಾಡಬೇಕು ಅಂತಾ ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ತಾಲೂಕು ಪ್ರ. ಕಾರ್ಯದರ್ಶಿ ಯಲ್ಲಪ್ಪ ಬೂತಾ, ರಮೇಶ ಹೂಗಾರ್, ಶಂಕರ ನಾಗವೋಳ, ದೇವಿಂದ್ರ ಮಡಿವಾಳ ಮತ್ತು ಇನ್ನಿತರ ಸಂಘಟನೆಯ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.