ETV Bharat / state

ಚಾಲಾಕಿ ಬೈಕ್​​ ಕಳ್ಳರ ಹಿಡಿಯುವಲ್ಲಿ ಯಶಸ್ವಿ... ನಾಲ್ಕು ಬೈಕ್ ಸೇರಿ 12 ಮೊಬೈಲ್ ವಶ - ಕಾಸಿಂ ಗರೆಬಾಳ ಮತ್ತು ಗಂಗಪ್ಪ ಗರೆಬಾಳ

ಬೈಕ್​​ ಕಳ್ಳತನ ಮಾಡಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಚಾಲಾಕಿ ಕಳ್ಳರಿಬ್ಬರನ್ನ ಯಾದಗಿರಿಯ ಶಹಪುರ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

bike-thieves-arrest-by-police-in-yadgiri
ಚಾಲಾಕಿ ಬೈಕ್​​ ಕಳ್ಳರ ಸೆರೆಯಲ್ಲಿ ಯಶಸ್ವಿಯಾದ್ರು ಪೊಲೀಸ್ರು
author img

By

Published : Mar 21, 2020, 4:00 AM IST

ಯಾದಗಿರಿ: ಬೈಕ್​​ ಕಳ್ಳತನ ಮಾಡಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಚಾಲಾಕಿ ಕಳ್ಳರಿಬ್ಬರನ್ನ ಶಹಪುರ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಖದೀಮ ಕಳ್ಳರಿಂದ ಲಕ್ಷಾಂತರ ರೂ. ಬೆಲೆಬಾಳುವ ಬೈಕ್​ಗಳನ್ನ ವಶಪಡಿಸಿಕೊಂಡಿದ್ದಾರೆ.

ಖಾಸೀಂ ಗರೆಬಾಳ ಮತ್ತು ಗಂಗಪ್ಪ ಗರೆಬಾಳ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಎರಡು ಪಲ್ಸರ್ ಮತ್ತು ಎರಡು ಸ್ಪ್ಲೆಂಡರ್​ ಬೈಕ್ ಸೇರಿದಂತೆ ಒಟ್ಟು ನಾಲ್ಕು ಬೈಕ್ ಮತ್ತು 12 ಮೊಬೈಲ್​ಗಳನ್ನ ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಹುಣಸಗಿ ಪಟ್ಟಣದ ನಿವಾಸಿಗಳಾದ ಖಾಸೀಂ ಮತ್ತು ಗಂಗಪ್ಪ ಕಳ್ಳತನವನ್ನೇ ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಬಂಧಿತರಿಂದ 2 ಲಕ್ಷ 37 ಸಾವಿರ ರೂ ಮೌಲ್ಯದ ಬೈಕ್​​ಗಳ ಜೊತೆ ಮೊಬೈಲ್​​​ಗಳನ್ನ ವಶಪಡಿಸಿಕೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಶಹಪುರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.