ETV Bharat / state

ಮನೆ ನಿರ್ಮಾಣ ಕಾಮಗಾರಿ ಸ್ಥಗಿತ: ಬಾಬುರಾವ್ ಚಿಂಚನಸೂರ್​ ವಿರುದ್ಧ ಫಲಾನುಭವಿಗಳ ಆಕ್ರೋಶ - JDS MLA Naganagouda Kandkur

ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಗುರುಮಠಕಲ್ ಪಟ್ಟಣದಲ್ಲಿ ಪ್ರಾರಂಭವಾದ ಮನೆ ನಿರ್ಮಾಣ ಕಾಮಗಾರಿಯನ್ನು ವಿಧಾನಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಸ್ಥಗಿತ ಮಾಡಿದ್ದಾರೆಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

House construction work
ಜೆಡಿಎಸ್ ಮುಖಂಡರು ಆಕ್ರೋಶ
author img

By

Published : Dec 17, 2022, 1:20 PM IST

ಬಾಬುರಾವ್ ಚಿಂಚನಸೂರ್​ ವಿರುದ್ಧ ಜೆಡಿಎಸ್ ಮುಖಂಡರು ಆಕ್ರೋಶ

ಗುರುಮಠಕಲ್(ಯಾದಗಿರಿ): ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಆರಂಭಿಸಿದ ಮನೆ ನಿರ್ಮಾಣ ಕಾಮಗಾರಿಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್​ ಅವರು ರಾಜಕೀಯ ಉದ್ದೇಶದಿಂದ ತಡೆಯೊಡ್ಡಿದ್ದಾರೆಂದು ಫಲಾನುಭವಿಗಳು ಆರೋಪಿಸಿದ್ದಾರೆ.

ಆರಂಭವಾದ ಕಾಮಗಾರಿ ಸ್ಥಗಿತ: ಗುರುಮಠಕಲ್ ಪಟ್ಟಣದಲ್ಲಿ ಸರ್ಕಾರವು ದಲಿತ ಸಮುದಾಯದ ಬಡ ಕುಶಲಕರ್ಮಿಗಳ ಕುಟುಂಬಸ್ಥರಿಗೆ ವಾಸಕ್ಕೆ ಮನೆ ನಿರ್ಮಾಣ ಮಾಡಿಕೊಡಲು ಡಾ.ಬಾಬು ಜಗಜೀವನ್​ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ರಾಜೀವ್ ಗಾಂಧಿ ವಸತಿ ನಿಗಮಗಳ ಸಹಯೋಗದಲ್ಲಿ ಜಿ+2 ಮಾದರಿಯ 72 ವಸತಿ ಮನೆಗಳ ನಿರ್ಮಾಣ ಮಾಡಲು ಹಣ ಬಿಡುಗಡೆ ಬಳಿಕ ಕಾಮಗಾರಿ ಆರಂಭಿಸಿತ್ತು. ಪ್ರತಿ ಮನೆಗೆ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಒಟ್ಟು 4.32 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ.

ಕಳೆದ ಮೇ ತಿಂಗಳಲ್ಲಿ ಜೆಡಿಎಸ್ ಶಾಸಕರಾದ ನಾಗನಗೌಡ ಕಂದಕೂರು ಮನೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ನಂತರ ರಾಜೀವ್ ಗಾಂಧಿ ನಿಗಮದ ಅಧಿಕಾರಿಗಳು ಮನೆ ನಿರ್ಮಾಣ ಕಾಮಗಾರಿ ಆರಂಭಿಸಲು ತಗ್ಗು ತೋಡಿದ್ದರು. ಆದ್ರೆ, ಕೆಲಸ ಆರಂಭಿಸಿದ ಕೆಲವೇ ದಿನಗಳ ನಂತರ ನಿಗಮದ ಅಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಕಾಮಗಾರಿ ಸ್ಥಗಿತ ಮಾಡಲು ವಿಧಾನಪರಿಷತ್ ಸದಸ್ಯಬಾಬುರಾವ್ ಚಿಂಚನಸೂರ್ ಕಾರಣ, ಅಧಿಕಾರಗಳ ಮೇಲೆ ಒತ್ತಡ ಹಾಕಿ ಕಾಮಗಾರಿ ಸ್ಥಗಿತ ಮಾಡಿದ್ದಾರೆಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

ಇದನ್ನೂ ಓದಿ: ಆನೇಕಲ್‌: ರಸ್ತೆ ಗುಂಡಿಗಳಿಂದ ಸವಾರರಿಗೆ ತೊಂದರೆ; ಇಲಾಖೆಯಿಂದ ಸಾಂಕೇತಿಕ ಸ್ಪಂದನೆ

ಚಿಂಚನಸೂರ್​ಗೆ ಸೋಲಿನ‌ ಆತಂಕ: ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಅವರ ಅವಧಿಯಲ್ಲಿ ಕಾಮಗಾರಿ ಆರಂಭ ಮಾಡಿ ನಂತರ ಮನೆ ಹಂಚಿಕೆ ಮಾಡಿದರೆ ತಮಗೆ ಮತ ಬರುವುದಿಲ್ಲವೆಂಬ ಲೆಕ್ಕಚಾರದಲ್ಲಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜೆಡಿಎಸ್ ಮುಖಂಡ ಜಿ.ತಮ್ಮಣ್ಣ ಮಾತನಾಡಿ, ವಿಧಾನಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್​ ಅವರು ಅಭಿವೃದ್ಧಿ ಕಾಮಗಾರಿಗೆ ಸಹಕಾರ ನೀಡಬೇಕು. ಆದರೆ, ರಾಜಕೀಯ ಕಾರಣದಿಂದ ತಮಗೆ ವೋಟ್ ಬರುವುದಿಲ್ಲವೆಂಬ ಭಯದಿಂದ ಹಾಗೂ ಇನ್ನಿತರೆ ಕಾರಣ ಹೇಳಿ ಅಧಿಕಾರಿಗಳಿಗೆ ಒತ್ತಡ ಹಾಕಿ, ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಒಂದು ವೇಳೆ ಬೇಗ ಕಾಮಗಾರಿ ಆರಂಭ ಮಾಡದಿದ್ದರೆ ದಲಿತ ವಿರೋಧಿಯಾದ ಚಿಂಚನಸೂರ್​ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಾಮಗಾರಿ ಗುದ್ದಲಿಪೂಜೆಗೆ ಬಂದ ಶಾಸಕರನ್ನ 10 ವರ್ಷಗಳಿಂದ ನೋಡಿಯೇ ಇಲ್ಲ: ಗ್ರಾಮಸ್ಥರು

ರಾಜೀವ್ ಗಾಂಧಿ ನಿಗಮದ ಅಧಿಕಾರಿ ಮಂಜುನಾಥ ಪ್ರತಿಕ್ರಿಯೆ ನೀಡಿ, ಫಲಾನುಭವಿಗಳ ಆಯ್ಕೆಯಲ್ಲಿ ಲೋಪವಾಗಿದ್ದು, ಈ ಹಿನ್ನೆಲೆ ಕಾಮಗಾರಿ ಸ್ಥಗಿತ ಮಾಡಲಾಗಿದೆ. ಮೇಲಾಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಇನ್ನು, ಫಲಾನುಭವಿಗಳ ಆಯ್ಕೆಯಲ್ಲಿ ಲೋಪವಾಗಿದ್ದರೆ ಅಗತ್ಯ ದಾಖಲೆಗಳ ಸಮೇತ ದೂರು ನೀಡಬಹುದಿತ್ತು. ಆದರೆ, ಕಾಮಗಾರಿ ಸ್ಥಗಿತ ಮಾಡಲು ಒತ್ತಡ ಹಾಕಿದ್ದು ಎಷ್ಟು ಸರಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.