ಗುರುಮಠಕಲ್: ಯಾದಗಿರಿ ಜಿಲ್ಲೆಯಲ್ಲಿ ಇಂದು ಮತ್ತೆ ಒಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಮುಂಬೈನಿಂದ ಬಂದಿರುವ ಗುರುಮಠಕಲ್ ತಾಲೂಕಿನ ಎಂಪಾಡ ತಾಂಡಾದ 55 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯ ಮತ್ತು ಜನರಲ್ಲಿ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರಿಗೆ ಆತಂಕ ಹೆಚ್ಚಾಗಿದೆ. ಒಟ್ಟು ಮಹಾರಾಷ್ಟ್ರದಿಂದ ಬಂದಿರುವ 11 ವಲಸೆ ಕಾರ್ಮಿಕರಿಗೆ ಇಲ್ಲಿವರೆಗೆ ಸೋಂಕು ತಗುಲಿದೆ. 55 ವರ್ಷದ ಈ ಮಹಿಳೆಗೆ ಮುಂಬೈನಿಂದ ಮೇ 14 ರಂದು ಖಾಸಗಿ ಕಾರ್ ಮೂಲಕ ಯಾದಗಿರಿಗೆ ಬಂದಿದ್ದಾಳೆ. ಮಹಿಳೆಗೆ ಜ್ವರ ತಪಾಸಣೆ ಮಾಡಿ, ನಂತರ ಆಕೆಯನ್ನು ಎಂಪಾಡ್ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಸೋಂಕಿತ ಮಹಿಳೆ ಸೇರಿ 14 ಜನರನ್ನ ಗುರುಮಠಕಲ್ ತಾಲೂಕಿನ ಎಂಪಾಡ್ ತಾಂಡಾದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾದಗಿರಿಯಲ್ಲಿ ಇದುವರೆಗೆ ಪತ್ತೆಯಾಗಿರುವ 13 ಸೋಂಕಿತರ ಪೈಕಿ, 11 ಸೋಂಕಿತರು ಮುಂಬೈನಿಂದ ಬಂದವರಾಗಿದ್ದು, ಇನ್ನಿಬ್ಬರು ಗುಜರಾತ್ನಿಂದ ಬಂದಿದ್ದವರಾಗಿದ್ದಾರೆ.