ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಅನಕಸುಗೂರು ಗ್ರಾಮದಲ್ಲಿ ಮಲ್ಲಯ್ಯನ ಸರಪಳಿ ಹರಿಯುವ ಆಚರಣೆಯಲ್ಲಿ ಮೇಕೆ ಬಲಿ ಕೊಡಲಾಗಿದೆ.
ಸರ್ಕಾರ ಪ್ರಾಣಿ ಬಲಿ ನಿಷೇಧ ಮಾಡಿದ್ರೂ ಹಳ್ಳಿಗಳಲ್ಲಿ ಮೌಢ್ಯತೆ ಇನ್ನೂ ಮುಂದುವರಿದೆ ಎನ್ನುವುದಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ. ಇದನ್ನು ತಡೆಯಬೇಕಾದ ಪೊಲೀಸರು ಸ್ಥಳದಲ್ಲಿದ್ರೂ ಮೌನವಹಿಸಿದ್ದು, ಮಡಿವಂತರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.