ಯಾದಗಿರಿ: ದೇವರ ಮುಂದಿಟ್ಟ ದೀಪ ಉರುಳಿ ಮನೆಗೆ ಬೆಂಕಿ ಹೊತ್ತಿದ ಪರಿಣಾಮ ಮನೆಯಲ್ಲಿದ್ದ ಸಮಗ್ರಿಗಳು ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ನಡೆದಿದೆ.
ಕಮಲಮ್ಮ ಸಾವೂರ ಎಂಬುವವರ ಮನೆಯಲ್ಲಿ ಈ ಘಟನೆ ಜರುಗಿದೆ. ನಿನ್ನೆ ಸಂಜೆ ಮನೆಯಲ್ಲಿನ ದೇವರ ಕೋಣೆಯಲ್ಲಿ ದೀಪ ಹಚ್ಚಿಡಲಾಗಿತ್ತು. ಆ ದೀಪವನ್ನು ಬೆಕ್ಕು ಉರುಳಿಸಿದ ಪರಿಣಾಮ ದೀಪದ ಕಿಡಿ ತಾಗಿ ಬೆಂಕಿ ಮನೆ ತುಂಬಾ ಆವರಿಸಿದೆ. ಸ್ಥಳೀಯರಿಂದ ಬೆಂಕಿ ನಂದಿಸಲಾಗಿದ್ದು, ಮನೆಯಲ್ಲಿದ್ದ ಬಟ್ಟೆ, ದವಸ ಧಾನ್ಯ, 25 ಗ್ರಾಂ ಚಿನ್ನಾಭರಣ ಸಮೇತ ಅಪಾರ ಪ್ರಮಾಣದ ವಸ್ತಗಳು ಭಸ್ಮವಾಗಿವೆ ಎಂದು ಮನೆಯವರು ತಿಳಿಸಿದ್ದಾರೆ.
ಈ ಸಂಬಂಧ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.