ಸುರಪುರ(ಯಾದಗಿರಿ) : ವಿದ್ಯಾಭಾರತಿ ಗ್ರಾಮೀಣ ಮತ್ತು ಶಿಕ್ಷಣ ಅಭಿವೃದ್ಧಿ ಸಂಸ್ಥೆ ಎಂಬ ಹೆಸರಲ್ಲಿ ಸಂಸ್ಥೆಯೊಂದನ್ನು ತೆರೆದು,ಸಂಸ್ಥೆಯ ಅಡಿಯಲ್ಲಿ ಶಾಲೆ ಆರಂಭಿಸಿರುವ ಈ ಶಿಕ್ಷಕ 50 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸುರಪುರ ತಾಲೂಕಿನ ಕವಡಿಮಟ್ಟಿ ಗ್ರಾಮದ ಬಳಿಯಲ್ಲಿ ವಿದ್ಯಾಭಾರತಿ ಶಾಲೆ ಆರಂಭಿಸಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಬಡ ಕುಟುಂಬದ ಮಕ್ಕಳನ್ನು ಕರೆತಂದು ಉಚಿತ ಶಿಕ್ಷಣ ನೀಡುವ ಮೂಲಕ ಶಾಲಾ ಮಂಡಳಿ ವಿಶ್ವ ಸಾಕ್ಷರ ದಿನಕ್ಕೆ ಅರ್ಥ ತುಂಬಿದ್ದಾರೆ.
ಕೇವಲ ಶಾಲೆ ಮಾತ್ರವಲ್ಲದೆ ಆಸರೆ ಎಂಬ ಹೆಸರಲ್ಲಿ ಅನಾಥಾಶ್ರಮವೊಂದನ್ನು ಆರಂಭಿಸಿ ಸುಮಾರು 11 ಮಕ್ಕಳಿಗೆ ಅನಾಥಾಶ್ರಮದಲ್ಲಿ ಆಶ್ರಯ ನೀಡಿ ಎಲ್ಲಾ ಮಕ್ಕಳಿಗೆ ಊಟ, ವಸತಿ, ಶಿಕ್ಷಣ ನೀಡುತ್ತಿದ್ದಾರೆ.