ಯಾದಗಿರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ತಾಯಿಯೊಬ್ಬಳು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆಯ ವೈದ್ಯರ ತಂಡದಿಂದ ಸಿಜೇರಿಯನ್ ಮೂಲಕ ಹೆರಿಗೆ ಮಾಡಲಾಗಿದ್ದು, ತಾಯಿ ಮತ್ತು ಮೂರು ಮಕ್ಕಳು ಆರೋಗ್ಯವಾಗಿದ್ದಾರೆ.
ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಪದ್ಮಾ ಎಂಬು ಮಹಿಳೆಯು, ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ತುಂಬು ಗರ್ಭಿಣಿಯಾಗಿದ್ದ ಪದ್ಮಾ ಅವರನ್ನು ಕಳೆದ ಒಂದು ವಾರದ ಹಿಂದೆ, ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಾಗಿತ್ತು. ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಆದರೆ ತಾಯಿ ಪದ್ಮಾಗೆ ಈಗ ರಕ್ತದ ಅವಶ್ಯಕತೆಯಿದ್ದು, ಜೊತೆಗೆ ಮಕ್ಕಳ ಪೋಷಣೆಗಾಗಿ ಈಗ ಬಡ ಕುಟುಂಬ ಸಹಾಯಕ್ಕಾಗಿ ಅಂಗಲಾಚುತ್ತಿದೆ.
ಪದ್ಮಾ ಹಾಗೂ ಆಕೆಯ ಪತಿ ನಾಗರಾಜ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಭೀತಿಯಿಂದ ತಮ್ಮ ಗ್ರಾಮಕ್ಕೆ ವಾಪಸ್ ಬಂದಿದ್ದರು.
ಬೆಂಗಳೂರಿನಿಂದ ವಾಪಸ್ ಆದ ಪದ್ಮಾವತಿ ಮತ್ತು ಆಕೆಯ ಪತಿ ನಾಗರಾಜ ಗ್ರಾಮದಲ್ಲಿ ಕೆಲಸವಿಲ್ಲದೆ ತಮ್ಮ ಉಪಜೀವನ ನಡೆಸುವದೆ ಕಷ್ಟಕರವಾಗಿತ್ತು. ಇಂತಹದರಲ್ಲಿ ಮೊದಲ ಹೆರಿಗೆ ಬಳಿಕ ಈಗ ಪದ್ಮಾ ಮೂರು ಮಕ್ಕಳಿಗೆ ಜನ್ಮ ನೀಡಿದ್ದು, ಒಂದು ಕಡೆ ದಂಪತಿಗೆ ಖುಷಿ ತಂದರೆ ಇನ್ನೊಂದೆಡೆ ಮಕ್ಕಳ ಲಾಲನೆ, ಪಾಲನೆ ಮಾಡುವದು ಹೇಗೆ ಅನ್ನೋ ಚಿಂತೆ ಎದುರಾಗಿದೆ.