ETV Bharat / state

ಕೆರೆ ನೋಡಲು ಹೋದ ಯುವಕ ಸಾವು.. - ಶಹಾಪುರದ ನಾಗರಕೆರೆಯಲ್ಲಿ ಯುವಕ ಸಾವು

ಮಳೆಯಿಂದಾಗಿ ತುಂಬಿದ್ದ ಕೆರೆಯನ್ನು ನೋಡಲು ಹೋದ ಯುವಕ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

YDR : crime news, death
ಶಹಪುರ ಪೊಲೀಸ್​ ಠಾಣೆ
author img

By

Published : Aug 29, 2022, 4:48 PM IST

ಯಾದಗಿರಿ: ಶಹಾಪುರ ತಾಲೂಕಿನಲ್ಲಿ ಮಳೆಯಿಂದಾಗಿ ತುಂಬಿರುವ ಕೆರೆ ನೋಡಲು ಹೋದ ಯುವಕ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಶಹಾಪುರ ಠಾಣೆ ವ್ಯಾಪ್ತಿಯ ಚರಬಸವೇಶ್ವರ ಗದ್ದಗಿ ಬಳಿ ನಡೆದಿದೆ.

ಆಸರಮೊಹಲ್ಲಾದ ಖಲೀಮ್ (23) ಮೃತ ಯುವಕ. ಜಿಲ್ಲೆಯಾದ್ಯಂತ ಬಾರಿ ಮಳೆಯಾಗಿದ್ದ ಹಿನ್ನೆಲೆ ತಾಲೂಕಿನ ನಾಗರಕೆರೆ ತುಂಬಿದ್ದು, ಇದನ್ನು ನೋಡಲು ತೆರಳಿದ ಖಲೀಮ್​ ಕಾಲು ಜಾರಿ ಕೆರೆಗೆ ಬಿದಿದ್ದು, ಈಜು ಬಾರದ ಹಿನ್ನೆಲೆ ನೀರಿನಲ್ಲಿ ಸಿಲುಕಿ ​ಮೃತ ಪಟ್ಟಿರುವುದಾಗಿ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹವನ್ನು ಹೊರತೆಗೆಯಲಾಗಿದ್ದು, ಶಹಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆ ನೋಡಲು ಹೋದ ಯುವಕ ಸಾವು ಪ್ರಕರಣ

ಇನ್ನು, ಮಳೆಗಾಲದ ಹಿನ್ನೆಲೆ ಜಿಲ್ಲೆಯಾದ್ಯಂತ ಕೆರೆ, ಹೊಳೆ ಸೇರಿದಂತೆ ನದಿಗಳು ತುಂಬಿ ಹರಿಯುತ್ತಿದ್ದು, ಯಾರು ಅಂತಹ ಸ್ಥಳಕ್ಕೆ ಹೋಗಿ ಈಜುವುದು ಅಥವಾ ಸೆಲ್ಫಿ ತೆಗೆಯುವಂತಹ ದುಸ್ಸಾಹಸ ಮಾಡದಂತೆ ಎಸ್ಪಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪಿಕ್ನಿಕ್​ಗೆ ಬಂದಿದ್ದ ಆರು ಜನರು ಜಲಪಾತದಲ್ಲಿ ಮುಳುಗಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.