ಗಂಗಾವತಿ: ಕೇರಳದ ಪ್ರಸಿದ್ಧ ತೀರ್ಥ ಕ್ಷೇತ್ರ ಹಾಗೂ ಧಾರ್ಮಿಕ ಸ್ಥಳವಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಲು ಹರಕೆ ಹೊತ್ತ 57 ಭಕ್ತರು ವಿದ್ಯಾನಗರದಲ್ಲಿ ಶಾಸ್ತ್ರೋಕ್ತವಾಗಿ ಮಾಲಾಧಾರಣೆ ಮಾಡಿದರು.
ಶಿವದಾಸ್ ಗುರುಗಳ ನೇತೃತ್ವದಲ್ಲಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ 57 ಜನ ಮಾಲಾಧರಣೆ ಮಾಡಿದರು. ಸಂಕ್ರಾಂತಿಯವರೆಗೆ ಮಾಲಾಧಾರಿಗಳು ವ್ರತ ಆಚರಿಸಲಿದ್ದು ಬಳಿಕ ಮಕರಜ್ಯೋತಿ ದರ್ಶನಕ್ಕೆ ತೆರಳಲಿದ್ದಾರೆ.
ಈ ಬಗ್ಗೆ ಮಾತನಾಡಿದ ಅಯ್ಯಪ್ಪ ಸ್ವಾಮಿ ಭಕ್ತ ವೆಂಕಟೇಶ, ತಮ್ಮ ಗುರುಗಳಾದ ಶಿವದಾಸ್ ಗುರುಗಳು ವರ್ಷಕ್ಕೆ ಎರಡರಿಂದ ಮೂರು ಬಾರಿಯಂತೆ ಈವರೆಗೂ 109 ಬಾರಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ. 59 ವರ್ಷದಿಂದ ನಿರಂತರವಾಗಿ ಜ್ಯೋತಿ ದರ್ಶನ ಮಾಡುತ್ತಿದ್ದಾರೆ ಎಂದರು.