ETV Bharat / state

ಯಾದಗಿರಿಗೆ ವಕ್ಕರಿಸಿದ 'ಮಹಾ' ಕೊರೊನಾ: ಮತ್ತೆ 15 ಮಂದಿಗೆ ಮಹಾಮಾರಿ ಸೋಂಕು ದೃಢ - Yadagiri Corona Update

ಯಾದಗಿರಿ ಜಿಲ್ಲೆಗೆ ಮಹಾರಾಷ್ಟ್ರದ ನಂಜು ಬೆಂಬಿಡದೆ ಕಾಡುತ್ತಿದೆ. 3 ವರ್ಷದ ಬಾಲಕ, ಬಾಲಕಿ ಹಾಗೂ 5 ವರ್ಷದ ಬಾಲಕ ಸೇರಿದಂತೆ ಮಹರಾಷ್ಟ್ರದ ಮುಂಬೈನಿಂದ ಇತ್ತೀಚೆಗೆ ಯಾದಗಿರಿಗೆ ಆಗಮಿಸಿದ 15 ವಲಸೆ ಕಾರ್ಮಿಕರಿಗೆ ಮಹಾಮಾರಿ ಸೋಂಕು ತಗುಲಿದೆ.

15 corona cases confirm again in Yadagiri
ಯಾದಗಿರಿಗೆ ತಪ್ಪದ ಕೊರೊನಾ ಕಂಟಕ: ಮತ್ತೆ 15 ಮಂದಿಗೆ ಕೊರೊನಾ ದೃಢ
author img

By

Published : May 25, 2020, 2:53 PM IST

ಯಾದಗಿರಿ: ಮಹರಾಷ್ಟ್ರದಿಂದ ಆಗಮಿಸಿದ ವಲಸೆ ಕಾರ್ಮಿಕರಲ್ಲಿ ಮತ್ತೆ 15 ಜನರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 126ಕ್ಕೆ ಏರಿಕೆಯಾಗಿದೆ.

ಯಾದಗಿರಿಗೆ ತಪ್ಪದ ಕೊರೊನಾ ಕಂಟಕ: ಮತ್ತೆ 15 ಮಂದಿಗೆ ಕೊರೊನಾ ದೃಢ

ಜಿಲ್ಲೆಗೆ ಮಹಾರಾಷ್ಟ್ರದ ನಂಜು ಬೆಂಬಿಡದೆ ಕಾಡುತ್ತಿದೆ. 3 ವರ್ಷದ ಬಾಲಕ, ಬಾಲಕಿ ಹಾಗೂ 5 ವರ್ಷದ ಬಾಲಕ ಸೇರಿದಂತೆ ಮಹಾರಾಷ್ಟ್ರದ ಮುಂಬೈನಿಂದ ಇತ್ತೀಚೆಗೆ ಯಾದಗಿರಿಗೆ ಆಗಮಿಸಿದ 15 ವಲಸೆ ಕಾರ್ಮಿಕರಿಗೆ ಸೋಂಕು ತಗುಲಿರುವುದು ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಮೂರು ವರ್ಷದ ಹೆಣ್ಣು ಮಗು ಪಿ-2113, 33 ವರ್ಷದ ವ್ಯಕ್ತಿ ಪಿ- 2114, 25 ವರ್ಷದ ಯುವಕ ಪಿ-2115, 17 ವರ್ಷದ ಬಾಲಕಿ ಪಿ- 2116, 22 ವರ್ಷದ ಮಹಿಳೆ ಪಿ-2117, 5 ವರ್ಷದ ಬಾಲಕ ಪಿ- 2118, 20 ವರ್ಷದ ಮಹಿಳೆ ಪಿ-2120, 3 ವರ್ಷದ ಗಂಡು ಮಗು ಪಿ-2121, 22 ವರ್ಷದ ಮಹಿಳೆ ಪಿ-2122, 25 ವರ್ಷದ ಮಹಿಳೆ ಪಿ-2123, 30 ವರ್ಷದ ವ್ಯಕ್ತಿ ಪಿ- 2124, 22 ವರ್ಷದ ಮಹಿಳೆಯರಿಬ್ಬರು ಪಿ-2225 ಹಾಗೂ ಪಿ-2226, 20 ವರ್ಷದ ಮಹಿಳೆ ಪಿ-2227, ಮತ್ತು 22 ವರ್ಷದ ಯುವಕ ಪಿ -2128 ಕೊರೊನಾ ಸೋಂಕಿಗೆ ತುತ್ತಾದವರು.

ಲಾಕ್ ಡೌನ್ ಸಡಿಲಿಕೆ ನಂತರ ಇತ್ತೀಚೆಗೆ ಯಾದಗಿರಿಗೆ ವಾಪಸ್ ಆದ ಇವರನ್ನ ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಸೋಂಕು ತಗುಲಿದ ಈ 15 ಜನರನ್ನು ಚಿಕಿತ್ಸೆಗಾಗಿ ಜಿಲ್ಲೆಯ ನೂತನ ಜಿಲ್ಲಾಸ್ಪತ್ರೆಯ ಕೋವಿಡ್-19 ವಾರ್ಡ್​ಗೆ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.