ETV Bharat / state

ನಾಗರ ಪಂಚಮಿ ಹಬ್ಬ: 16 ಗಂಟೆಯಲ್ಲಿ 120 ಕಿಮೀ ನಡೆಯಲು 1 ಲಕ್ಷ ರೂ. ಬಾಜಿ

ಸುರಪುರದಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ನಡೆದ ಕಾಲ್ನಡಿಗೆ ಪಂದ್ಯದಲ್ಲಿ ಇಟಗಿ ಗ್ರಾಮದ ಮಲ್ಲಣ್ಣ ಮದರಿ ಎಂಬಾತ 16 ಗಂಟೆಗಳಲ್ಲಿ 120 ಕಿ.ಮೀ ನಡೆಯಲು 1 ಲಕ್ಷ ರೂ. ಬಾಜಿ ಕಟ್ಟಿದ್ದರು.

120 km non stop walking
ನಾಗರ ಪಂಚಮಿ ಹಬ್ಬ
author img

By

Published : Jul 20, 2020, 6:35 PM IST

ಸುರಪುರ: ನಾಗರ ಪಂಚಮಿ ಹಬ್ಬದ ಅಂಗವಾಗಿ ನಡೆದ ಕಾಲ್ನಡಿಗೆ ಪಂದ್ಯಕ್ಕೆ ಇಟಗಿ ಗ್ರಾಮದ ಮಲ್ಲಣ್ಣ ಮದರಿ ಎಂಬಾತ 16 ಗಂಟೆಗಳಲ್ಲಿ 120 ಕಿ.ಮೀ ನಡೆಯಲು 1 ಲಕ್ಷ ರೂ. ಬಾಜಿ ಕಟ್ಟಿದ್ದರು.

ಶಹಾಪುರ ತಾಲೂಕಿನ ಇಟಗಿ ಗ್ರಾಮದಿಂದ ಸುರಪುರ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನ ತಲುಪಿ, ಮರಳಿ ಗ್ರಾಮಕ್ಕೆ ಬರಬೇಕಾಗಿತ್ತು. ಇಟಗಿಯಿಂದ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ 60 ಕಿ.ಮೀ (ಹೋಗಿ ಬರಲು 120 ಕಿ.ಮೀ) ದೂರವಿದೆ.

ಪಂದ್ಯದ ಕುರಿತು ಗ್ರಾಮಸ್ಥರ ಅಭಿಪ್ರಾಯ

ಶಿವಶರಣ ಮಾಗಾ ಎಂಬವರು ಮಲ್ಲಣ್ಣ ಮದರಿ ಅವರೊಂದಿಗೆ 1 ಲಕ್ಷ ರೂ. ಪಂದ್ಯ ಕಟ್ಟಿದ್ದರು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಒಟ್ಟು 16 ಗಂಟೆಗಳಲ್ಲಿ 120 ಕಿ.ಮೀ ನಡೆಯಬೇಕಾಗಿತ್ತು. ಮಲ್ಲಣ್ಣ ಮದರಿ ಮಧ್ಯಾಹ್ನ 1 ಗಂಟೆಗೆ ದೇವಸ್ಥಾನ ತಲುಪಿ, ದೇವರ ದರ್ಶನ ಪಡೆದು ಮರಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.