ETV Bharat / state

ಪುರಸಭೆ ಮುಖ್ಯಾಧಿಕಾರಿಯ ವಜಾಕ್ಕೆ ಒತ್ತಾಯ: ಯುವ ಜನ ಸೇನಾ ಸಂಘಟನೆಯಿಂದ ಮನವಿ - ಮುದ್ದೇಬಿಹಾಳ

ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್‌ಗೆ ಹೋರಾಟಗಾರ ಶಿವಾನಂದ ವಾಲಿ ವಿರುದ್ಧ ದುರುದ್ದೇಶಪೂರ್ವಕ ದೂರು ದಾಖಲಿಸಿರುವುದನ್ನು ಖಂಡಿಸಿ ಯುವಜನಸೇನಾ ಸಂಘಟನೆಯ ವತಿಯಿಂದ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

Yuva Sena sangha
ಯುವಜನಸೇನಾ ಸಂಘಟನೆ
author img

By

Published : Jul 1, 2020, 12:13 PM IST

ಮುದ್ದೇಬಿಹಾಳ(ವಿಜಯಪುರ): ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸಿ ಹೋರಾಟಗಾರನ ಮೇಲೆ ಸುಳ್ಳು ದೂರು ದಾಖಲಿಸಿರುವ ಅಧಿಕಾರಿ ಗೋಪಾಲ ಕಾಸೆ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ಹೋರಾಟಗಾರ ಶಿವಾನಂದ ವಾಲಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಯುವ ಜನಸೇನಾ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

appeal to Tehsildar
ತಹಶೀಲ್ದಾರ್‌ಗೆ ಸಲ್ಲಿಸಿದ ಮನವಿ ಪತ್ರ

ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಸಂಘಟನೆಯ ಪದಾಧಿಕಾರಿಗಳು ಹಾಗೂ ಪುರಸಭೆ ಮಾಜಿ, ಹಾಲಿ ಸದಸ್ಯರು ತಹಶೀಲ್ದಾರ್ ಜಿ.ಎಸ್. ಮಳಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕಾಧ್ಯಕ್ಷ ಶಿವಾನಂದ ಆಲಕೊಪ್ಪರ, ನಾಲತವಾಡದಲ್ಲಿ ಮಳೆ ಬಂದು ಮನೆಗಳಿಗೆ ನೀರು ನುಗ್ಗಿತ್ತು. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇಲ್ಲಿ ಇದ್ದರೂ ಅಧಿಕಾರಿಗಳು ಗಮನ ಹರಿಸದೇ ಇರುವುದನ್ನು ಪ್ರಶ್ನಿಸಲು ಹೋದ ಹೋರಾಟಗಾರರ ಮೇಲೆ ರಾಜಕೀಯ ವ್ಯಕ್ತಿಗಳ ಕೈಗೊಂಬೆಯಂತೆ ವರ್ತಿಸಿ ಸುಳ್ಳು ದೂರು ದಾಖಲಿಸಲಾಗಿದೆ. ತಾಲೂಕಿನಲ್ಲಿ ಹೋರಾಟಗಾರ, ಸಂಘಟನೆಯ ಮುಖಂಡರ ಧ್ವನಿಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಒಂದು ವೇಳೆ ವಾಲಿ ಅವರನ್ನು ಬಿಡುಗಡೆ ಮಾಡದಿದ್ದರೆ ತಹಶೀಲ್ದಾರ್ ಕಚೇರಿಯ ಎದುರಿಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಂಘಟನೆಯ ಪದಾಧಿಕಾರಿಗಳು ಎಚ್ಚರಿಸಿದ್ದಾರೆ. ಈ ವೇಳೆ ತಹಶೀಲ್ದಾರ್ ಜಿ.ಎಸ್. ಮಳಗಿ ಅವರಿಗೆ ಮನವಿ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಗುರು ತಂಗಡಗಿ, ಬೈಲಪ್ಪ ಜಾಲಿಗಿಡದ, ಬಸವರಾಜ ಬಂಡಿವಡ್ಡರ, ಸದಾಶಿವ ಬೇವಿನಕಟ್ಟಿ, ಸೋಮಪ್ಪ ಹಿಪ್ಪರಗಿ, ಗಂಗಪ್ಪ ಜೋಗಿ, ಶಿವು ದಿಂಡವಾರ, ಸಂಗಮೇಶ ಚಲವಾದಿ, ಬಾಬು ಕಸಾಬ, ಸಂಗಪ್ಪ ಕಟ್ಟಿಮನಿ ಸೇರಿದಂತೆ ಹಲವರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.