ವಿಜಯಪುರ: ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಹೋಗುವಾಗ ಪೊಲೀಸರು 500 ರೂಪಾಯಿ ದಂಡ ಹಾಕಿದ್ದಕ್ಕೆ ಯುವಕರು ಕಿರಿಕ್ ಮಾಡಿರುವ ಘಟನೆ ನಗರದ ಎಸ್ಪಿ ಕಚೇರಿ ಬಳಿ ನಡೆದಿದೆ.
ದಂಡ ಹಾಕಿದ್ದಕ್ಕೆ ಕೋಪಗೊಂಡ ಯುವಕರು ಪೊಲೀಸ್ ಅಧಿಕಾರಿಗಳ ಜೊತೆ ಜಗಳ ಮಾಡಿದ್ದಾರೆ. ಈ ವೇಳೆ, ಅವಾಚ್ಯ ಶಬ್ದಗಳಿಂದ ಪೊಲೀಸರಿಗೆ ನಿಂದಿಸಿದ್ದಾರೆ. ಬಳಿಕ ಪೊಲೀಸರು ಬೈಕ್ ಅನ್ನು ಸೀಜ್ ಮಾಡಿ ಠಾಣೆಗೆ ತೆಗೆದುಕೊಂಡು ಹೋದರು. ನಂತರ ಯುವಕರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು, 500 ರೂ ದಂಡ ಕಟ್ಟಿದ ಮೇಲೆ ಅವರನ್ನು ಬೈಕ್ ಸಮೇತ ಬಿಟ್ಟು ಕಳುಹಿಸಲಾಗಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ತುಮಕೂರು: ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಅಪ್ರಾಪ್ತರನ್ನು ಹಿಡಿದು ದಂಡ ಹಾಕಿಸಿದ ನ್ಯಾಯಾಧೀಶೆ