ETV Bharat / state

ಸಾಫ್ಟ್​​ವೇರ್ ಇಂಜಿನಿಯರ್​ ಕೆಲಸ ಬಿಟ್ಟು ಮೀನು ಸಾಕಣೆಯಲ್ಲಿ ಯಶಕಂಡ ಯುವಕ.. ಲಕ್ಷ ಲಕ್ಷ ಗಳಿಕೆ!

author img

By

Published : Mar 29, 2022, 10:46 AM IST

ಸಾಫ್ಟ್​​ವೇರ್ ಇಂಜಿನಿಯರ್​ ಆಗಿದ್ದ ವಿರೇಶ ಕವಟಗಿ ಕೋವಿಡ್​ ಸಂದರ್ಭದಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಮೀನು ಸಾಕಣೆ ಆರಂಭಿಸಿ ಸದ್ಯ ವಾರ್ಷಿಕ ಲಕ್ಷಾಂತರ ರೂ. ಲಾಭ ಗಳಿಸುತ್ತಿದ್ದಾರೆ.

young man succeed in Fish farming at vijayapura
ಮೀನು ಸಾಕಾಣಿಕೆಯಲ್ಲಿ ಯಶಸ್ವಿಯಾದ ವಿಜಯಪುರ ಯುವಕ

ವಿಜಯಪುರ: ವೃತ್ತಿಯಲ್ಲಿ ಸಾಫ್ಟ್​​ವೇರ್ ಇಂಜಿನಿಯರ್​ ಆಗಿದ್ದ ಜಿಲ್ಲೆಯ ಮದಭಾವಿಯ ಯುವಕ ವಿರೇಶ ಕವಟಗಿ ಇದೀಗ ಮೀನು ಸಾಕಣೆ ಮಾಡಿ ಯಶಸ್ಸು ಕಂಡಿದ್ದಾರೆ. ಕೋವಿಡ್​ ಸಂದರ್ಭದಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಮೀನು ಸಾಕಣೆ ಆರಂಭಿಸಿ ಈಗ ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲ ಇತರರಿಗೂ ಪ್ರೇರಣೆಯಾಗಿದ್ದಾರೆ.

ವಿರೇಶ ಕವಟಗಿ ದೆಹಲಿಯಲ್ಲಿ ಬಿಇ ಇನ್ ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಕಲಿತು, ಸರ್ಕಾರಿ ಅಧಿಕಾರಿಯಾಗಬೇಕು ಎನ್ನುವ ಕನಸು ಕಂಡಿದ್ದರು. ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸುತ್ತ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್​​ವೇರ್ ಇಂಜನಿಯರ್​ ಆಗಿ ಉದ್ಯೋಗ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ದೇಶದಲ್ಲಿ ಕೋವಿಡ್​ ವಕ್ಕರಿಸಿದ ಕಾರಣ ಆ ಕೆಲಸ ಬಿಟ್ಟು ಬಂದು ಸ್ವಂತ ಗ್ರಾಮದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಛಲಕ್ಕೆ ಬಿದ್ದಾಗ ಅವರಿಗೆ ಹೊಳೆದಿದ್ದು ಮೀನು ಸಾಕಣೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೀನು ಸಾಕಣೆ ಮಾಡಬೇಕೆಂದುಕೊಂಡರು. ಹೈದರಾಬಾದ್, ಕಯಿಕಲೂರ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಮರ್ಲ ಜಾತಿ ಮೀನಿಗೆ ಹೆಚ್ಚು ಬೇಡಿಕೆ ಇದ್ದು, ಕೇವಲ 8 ತಿಂಗಳಲ್ಲಿ ಮೀನು ಕೈಗೆ ಬರುತ್ತದೆ. ಒಂದು ಜೀವಂತ ಮೀನು ಕೆ.ಜಿಗೆ 400 ರೂ. ಇದೆ. ಇದನ್ನು ಸಾಕುವುದು ದುಬಾರಿ ವೆಚ್ಚವಾದರೂ ಹೆಚ್ಚು ಲಾಭದಾಯಕ ಎಂದು ತಿಳಿದು ಈ ಮೀನಿನ ಕೃಷಿಗೆ ಕೈ ಹಾಕಿದರು.

ಇದಕ್ಕೆ ಹೈದರಾಬಾದ್​ನಲ್ಲಿ ತರಬೇತಿ ಪಡೆದು ಬಯೋಪ್ಲಾಕ್ ಮೀನು ಸಾಕಾಣಿಕೆಗೆ 0.1 ಹೆಕ್ಟೆರ್ ಜಮೀನಿನಲ್ಲಿ 180 ಅಡಿ ಉದ್ದ ಹಾಗೂ 70 ಅಡಿ ಅಗಲದ ಬಯೋಫ್ಲಾಕ್ ಹೊಂಡ ನಿರ್ಮಿಸಿದರು. ಸರ್ಕಾರದ ಮತ್ಸ್ಯ ಯೋಜನೆಯ ಸಬ್ಸಿಡಿ ಪಡೆದು, 8 ಎರಿಯೇಷನ್ ಯಂತ್ರ, 25 ಸಾವಿರ ಮರ್ಲಜಾತಿಯ ಮೀನು ತಂದು ಹೊಂಡದಲ್ಲಿ ಬಿಟ್ಟಿದ್ದಾರೆ. ಸಮಯ ಸಮಯಕ್ಕೆ ಔಷಧೋಚಾರ ಮಾಡಿ ಸರಿಯಾದ ಆಹಾರ ಪದ್ಧತಿ ಅನುಸರಿಸಿದರೆ ಮೀನು ಸಾಕಾಣಿಕೆಯಲ್ಲಿ ಹೆಚ್ಚು ಲಾಭ ನಿರೀಕ್ಷಿಸಬಹುದು ಎಂಬುದನ್ನು ಈ ಯುವಕ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಿಂದ 'ಸ್ವಚ್ಛ ಭಾರತ್ ಕಾಯಕಲ್ಪಕ್ಕೆ' ಚಾಲನೆ

ಇದರ ಜೊತೆಗೆ ಯಾರಾದರು ಮೀನು ಸಾಕಣೆಗೆ ಮುಂದೆ ಬಂದರೆ ಅವರಿಗೆ ತರಬೇತಿ ನೀಡಲು ತಯಾರಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ‌ ಮೀನು‌ ಕೃಷಿ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎನ್ನುವದನ್ನು ತೋರಿಸಿಕೊಟ್ಟಿದ್ದಾರೆ ವಿರೇಶ ಕವಟಗಿ. ಇವರಿಂದ ಹೆಚ್ಚಿನ ಮಾಹಿತಿ ಪಡೆಯಲು 8951000568 ನಂಬರ್​ಗೆ ಸಂಪರ್ಕಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.