ETV Bharat / state

ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವು.. ಶವಕ್ಕಾಗಿ ಶೋಧ

ಮೂವರು ಯುವಕರು ಬಟ್ಟೆ ತೊಳೆಯಲು ಕಾಲುವೆಯಲ್ಲಿ ಇಳಿದಿದ್ದ ವೇಳೆ ಕಾಲು ಜಾರಿ ಕಾಲುವೆಯಲ್ಲಿ ಬಿದ್ದ ದುರ್ಗಪ್ಪನಿಗೆ ಈಜು ಬಾರದೇ ಸಾವನ್ನಪ್ಪಿದ್ದಾನೆ.‌ ಜೊತೆಗಿದ್ದ ಇಬ್ಬರು ಯುವಕರು ದುರ್ಗಪ್ಪನ ರಕ್ಷಣೆಗೆ ಪ್ರಯತ್ನಿಸಿದರು. ಆದ್ರೆ ಅವರ ಪ್ರಯತ್ನ ವಿಫಲರಾಗಿದ್ದಾರೆ.

young man died slipping into the canal
ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವು
author img

By

Published : Oct 17, 2022, 4:14 PM IST

ವಿಜಯಪುರ: ಬಟ್ಟೆ ತೊಳೆಯಲು ಕಾಲುವೆಗೆ ಹೋಗಿದ್ದ ಯುವಕನೊಬ್ಬ ಕಾಲು ಜಾರಿ ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ.‌ ಗ್ರಾಮದ ಹೊರ ಭಾಗದಲ್ಲಿನ ಕಾಲುವೆಯಲ್ಲಿ ಈ ಘಟನೆ ನಡೆದಿದ್ದು, ದುರ್ಗಪ್ಪ ಗೊಲ್ಲರ (20) ಕಾಲುವೆ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.

ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ಈ ದುರ್ಘಟನೆ ನಡೆದಿದೆ. ಮೂವರು ಯುವಕರು ಬಟ್ಟೆ ತೊಳೆಯಲು ಕಾಲುವೆಯಲ್ಲಿ ಇಳಿದಿದ್ದ ವೇಳೆ ಕಾಲು ಜಾರಿ ಕಾಲುವೆಯಲ್ಲಿ ಬಿದ್ದ ದುರ್ಗಪ್ಪನಿಗೆ ಈಜು ಬಾರದೇ ಸಾವನ್ನಪ್ಪಿದ್ದಾನೆ.‌ ಜೊತೆಗಿದ್ದ ಇಬ್ಬರು ಯುವಕರು ದುರ್ಗಪ್ಪನ ರಕ್ಷಣೆಗೆ ಶ್ರಮಪಟ್ಟರೂ ಸಹ ವಿಫಲರಾಗಿದ್ದಾರೆ.

ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವು

ದುರ್ಗಪ್ಪನ ಶವಕ್ಕಾಗಿ ಸ್ಥಳೀಯರಿಂದ ಶೋಧ ಆರಂಭವಾಗಿದೆ. ಸ್ಥಳಕ್ಕೆ ಮನಗೂಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಆಗಮಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಹುಬ್ಬಳ್ಳಿ ಬಳಿ ಟಾಟಾ ಏಸ್ - ಕಾರ್ ಡಿಕ್ಕಿ: 15 ಕ್ಕೂ ಹೆಚ್ಚು ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.