ಮುದ್ದೇಬಿಹಾಳ: ಹೇಳದೆ, ಕೇಳದೆ ಒಂದು ಸಾವಿರ ರೂಪಾಯಿ ದುಡ್ಡು ಡ್ರಾ ಮಾಡಿದ್ದನ್ನು ಪೋಷಕರು ಪ್ರಶ್ನಿಸಿದ್ದರು. ಇದರಿಂದಾಗಿ ಅಪ್ರಾಪ್ತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಬಾಲಕಿ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೂನ್ 24 ರಂದು ತಾಲೂಕಿನ ಶಿರೋಳ ಗ್ರಾಮದ ಹೊರವಲಯದಲ್ಲಿ ಪಟ್ಟಣದ ಹೊರಪೇಟೆ ಓಣಿಯ ನಿವಾಸಿ ನೇಣಿಗೆ ಶರಣಾಗಿದ್ದಳು. ಬಾಲಕಿಯು ಪೋಷಕರಿಗೆ ತಿಳಿಸದೇ ಬ್ಯಾಂಕ್ನಿಂದ ಹಣ ಡ್ರಾ ಮಾಡಿದ್ದನ್ನು ತಂದೆ ಗಿರೀಶ್ ಪ್ರಶ್ನಿಸಿ, ಬುದ್ಧಿವಾದ ಹೇಳಿದ್ದರು.
ಈ ಸಮಯದಲ್ಲಿ ಬಾಲಕಿ ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದವಳು, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಅಷ್ಟೊತ್ತಿಗಾಗಲೇ ಊರ ತುಂಬೆಲ್ಲಾ ಈಕೆಯ ಸಾವಿನ ಸುದ್ದಿ ಹರಡಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೋಷಕರು ಮಗಳ ಮೃತದೇಹ ಕಂಡು ಗೋಳಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ತಂದೆ ಗಿರೀಶ್ ಹಡಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಮುದ್ದೇಬಿಹಾಳ: ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆ