ETV Bharat / state

ಫೇಸ್​​ಬುಕ್​ಗೆ ಫೋಟೋ ಹಾಕಿದ ಪ್ರಿಯಕರ: ಮನನೊಂದು ಯುವತಿ ಆತ್ಮಹತ್ಯೆ! - ಬೂದಿಹಾಳ ಪಿಹೆಚ್ ಗ್ರಾಮ

ಪ್ರಿಯಕರ ತನ್ನ ಜೊತೆಯಿದ್ದ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಅಪ್​​ಲೋಡ್ ಮಾಡಿದ್ದಾನೆ ಎಂದು ಮಾನಸಿಕವಾಗಿ ನೊಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

girl committed suicide
author img

By

Published : Sep 19, 2019, 10:55 AM IST

ವಿಜಯಪುರ: ತನ್ನ ಜೊತೆಗಿರುವ ಫೋಟೋಗಳನ್ನು ಪ್ರಿಯಕರ ಫೇಸ್​ಬುಕ್​ನಲ್ಲಿ ಅಪ್​ಲೋಡ್ ಮಾಡಿದ್ದಾನೆ ಎಂದು ಮಾನಸಿಕವಾಗಿ ನೊಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ.

ಸಿಂದಗಿ ತಾಲೂಕಿನ ಗ್ರಾಮವೊಂದರ 23 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವತಿಯ ಸಾವಿಗೆ ಪ್ರಿಯಕರ ಶಿವಾನಂದ ಬಿರಾದಾರ ಎಂಬಾತನ ಫೇಸ್​ಬುಕ್ ಪ್ರಚಾರವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಪಿಯುಸಿ ಓದುತ್ತಿರುವಗಾಲೇ ಯುವತಿ ಹಾಗೂ ಕೆರೂಟಗಿ ಗ್ರಾಮದ ಶಿವಾನಂದನಿಗೆ ಪರಿಚಯವಾಗಿದೆ. ಪರಿಚಯ ಪ್ರೀತಿಯಾಗಿ ಅವರಿಬ್ಬರು ಆಗಾಗ ಪಾರ್ಕ್​, ಹೋಟೆಲ್​ ಹೀಗೆ ಸುತ್ತಾಟ ನಡೆಸುವಾಗ ಸಾಮಾನ್ಯವಾಗಿ ಪೋಟೋಗಳನ್ನು ತೆಗೆದುಕೊಂಡಿದ್ದಾರೆ.

ಈ ಫೋಟೋಗಳನ್ನು ಶಿವಾನಂದ ಫೇಸ್​ಬುಕ್​ನಲ್ಲಿ ಅಪ್​ಲೋಡ್​​ ಮಾಡಿ ಪ್ರಚಾರ ಪಡೆದಿದ್ದನಂತೆ. ಇದರಿಂದ ಮನನೊಂದ ಯುವತಿ ಮನೆಯಲ್ಲಿದ್ದ ಸೀಮೆಎಣ್ಣೆ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ: ತನ್ನ ಜತೆಗಿನ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಪ್ರಿಯಕರ ಅಪಲೋಡ್ ಮಾಡಿದ್ದಾನೆ ಎಂದು ಮಾನಸಿಕವಾಗಿ ಕುಗ್ಗಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ.
ಸಿಂದಗಿ ತಾಲೂಕಿನ ಬೂದಿಹಾಳ ಪಿಹೆಚ್ ಗ್ರಾಮದ 23 ವರ್ಷದ ಸುಧಾರಾಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಯುವತಿಯ ಸಾವಿಗೆ ಪ್ರೇಮಿ ಶಿವಾನಂದ ಬಿರಾದಾರ ಎಂಬಾತನ, ಫೇಸ್ ಬುಕ್ ಪ್ರಚಾರ ಕಾರಣ ಎನ್ನಲಾಗ್ತಿದೆ. ಪಿಯುಸಿ ಓದುವಾಗ್ಲೇ ಸುಧಾರಾಣಿ ಹಾಗೂ ಕೆರೂಟಗಿ ಗ್ರಾಮದ ಶಿವಾನಂದ ನಡುವೆ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಸುಲುಗೆ ಬೆಳೆದು ಪ್ರೀತಿ ಮೂಡಿದೆ. ಹೀಗಾಗಿ ಆಗಾಗ ಪಾರ್ಕ್ ಸುತ್ತಾಟ ನಡೆದಿದೆ. ಈ ವೇಳೆ ಇಬ್ಬರು ಜೊತೆಯಾಗಿ ಫೋಟೋ ಸಹ ತೆಗೆದುಕೊಂಡಿದ್ದಾರೆ.
ಮುಂದೆ ಯುವತಿ ವಿಜಯಪುರಕ್ಕೆ ಕೋಚಿಂಗ್ ಗೆ ಹೋಗಿದ್ದಾಳೆ. ಅಲ್ಲಿಗೂ ಹೋಗಿ ಬಂದು ಮಾಡ್ತಿದ್ದ ಶಿವಾನಂದ ಸೆಲ್ಫಿ ಫೋಟೋಗಳನ್ನ ತೆಗೆದುಕೊಂಡಿದ್ರು. ಅವುಗಳನ್ನ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ ಪ್ರಚಾರ ಪಡೆದಿದ್ದ. ಇದ್ರಿಂದ ಯುವತಿ ಮಾನಸಿಕವಾಗಿ ನೊಂದಿದ್ದಳು. ಈ ಕಾರಣಕ್ಕೆ ಮನೆಯಲ್ಲಿದ್ದ ಸೀಮೆಎಣ್ಣೆ ಕುಡಿದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.