ETV Bharat / state

ಸೈಕಲ್​ ಮೂಲಕ ಬೆಂಗಳೂರಿಂದ ಯುಪಿಗೆ ಹೊರಟ ಕೂಲಿ ಕಾರ್ಮಿಕರಿಗೆ ಆಲಮಟ್ಟಿ ಜನರಿಂದ ಊಟೋಪಚಾರ - ಕಾಲ್ನಡಿಗೆ ಮೂಲಕ ಊರಿಗೆ ಪ್ರಯಾಣ

ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಸೈಕಲ್​ ಮೂಲಕ ತೆರಳಿರುವ 41 ವಲಸೆ ಕಾರ್ಮಿಕರು, ನಿನ್ನೆ ರಾತ್ರಿ ವಿಜಯಪುರದ ಆಲಮಟ್ಟಿಗೆ ತಲುಪಿದರು.

workers-travel-by-bicycle
ಸೈಕಲ್ ಮೂಲಕ ಪಯಣ
author img

By

Published : Apr 23, 2020, 10:40 AM IST

ವಿಜಯಪುರ: ಲಾಕ್​​​ಡೌನ್ ಜಾರಿಯಾದ ಪರಿಣಾಮ ವಲಸೆ ಕಾರ್ಮಿಕರ ಪಾಡು ಹೇಳತೀರದಾಗಿದೆ. ಲಾಕ್​ಡೌನ್​ ಅವಧಿಯಲ್ಲಿ ರಾಜ್ಯ ಸರ್ಕಾರಗಳು ಉಚಿತ ಊಟದ ವ್ಯವಸ್ಥೆ ಕಲ್ಪಿಸಿದ್ದರೂ ಕಾರ್ಮಿಕರು ವಾಹನಗಳ ಅನುಪಸ್ಥಿತಿಯಲ್ಲಿ ಕಾಲ್ನಡಿಗೆ ಮತ್ತು ಸೈಕಲ್ ​​ಮೂಲಕ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ದುಡಿಯಲು ಕೆಲಸವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ಊಟಕ್ಕಾಗಿ ಅಲೆಯುವ ಪರಿಸ್ಥಿತಿ ಬಂದಿದೆ. ಹೀಗಾಗಿ ಊರುಗಳತ್ತ ಹೊರಡುತ್ತಿದ್ದಾರೆ.

ಸೈಕಲ್ ಮೂಲಕ ಪಯಣ

ಕಳೆದ ನಾಲ್ಕು ದಿನಗಳಿಂದ ಸೈಕಲ್​ ಮೂಲಕ ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ 41 ಕಾರ್ಮಿಕರು, ಕಳೆದ ರಾತ್ರಿ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಕಾಣಿಸಿಕೊಂಡರು. ಈ ಕಾರ್ಮಿಕರಿಗೆ ಸ್ಥಳೀಯರು ಊಟದ ವ್ಯವಸ್ಥೆಯನ್ನೂ ಮಾಡಿದ್ದರು.

ಉತ್ತರ ಪ್ರದೇಶದ ಹರಿದೋಹಿ ಜಿಲ್ಲೆಯವರಾದ ಈ ಕಾರ್ಮಿಕರು ಲಾಕ್​​​ಡೌನ್ ಹಿನ್ನೆಲೆಯಲ್ಲಿ ದುಡಿಯಲು ಕೆಲಸವಿಲ್ಲದೇ, ಊಟಕ್ಕೆ ಕಾಸಿಲ್ಲದೆ ಪರದಾಡಿ, ಕೊನೆಗೆ ಊರಿಗೆ ಹೋಗಬೇಕೆಂದು ನಿರ್ಧರಿಸಿದ್ದಾರೆ. ಇಲ್ಲಿ ಸ್ಥಳೀಯರು ಏರ್ಪಾಟು ಮಾಡಿದ ಊಟ ಸವಿದು ಮತ್ತೆ ತಮ್ಮ ಸೈಕಲ್ ಸವಾರಿಯನ್ನು ಮುಂದುವರೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.