ETV Bharat / state

ರಾಜಕೀಯ ನಿವೃತ್ತಿ ಹೊಸ್ತಿಲಿನಲ್ಲಿ ನಾನೇಕೆ ಕಾಂಗ್ರೆಸ್​ಗೆ ಹೋಗಲಿ: ರಮೇಶ್​ ಜಿಗಜಿಣಗಿ - ಬಿಜೆಪಿ

ರಾಜಕೀಯ ನಿವೃತ್ತಿ ಹೊಸ್ತಿಲಿನಲ್ಲಿ ನಾನೇಕೆ ಕಾಂಗ್ರೆಸ್​ಗೆ ಹೋಗಲಿ, ​ನಾನು ಕಾಲೇಜ್ ದಿನಗಳಿಂದಲೇ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿದ್ದೇನೆ, ದಲಿತ ಸಿಎಂ ಕರ್ನಾಟಕದಲ್ಲಿ ಆಗುವುದು ನಿಶ್ವಿತ

BJP MP Ramesh Jigajinagi
ಬಿಜೆಪಿ ಸಂಸದ ರಮೇಶ್​ ಜಿಗಜಿಣಗಿ
author img

By

Published : Dec 29, 2022, 7:29 PM IST

ಗೋರಿಯಲ್ಲಿ ಈಗಾಗಲೇ ಒಂದು ಕಾಲು ಇಟ್ಟಿದ್ದೇನೆ, ಇನ್ನೇನು ಕಾಂಗ್ರೆಸ್ಗೆ ಹೋಗಲಿ ಎಂದ ಸಂಸದ ರಮೇಶ್​ ಜಿಗಜಿಣಗಿ

ವಿಜಯಪುರ : ಗೋರಿಯಲ್ಲಿ ಈಗಾಗಲೇ ಕಾಲು ಇಟ್ಟಿದ್ದೇನೆ, ಮತ್ತೇಕೆ ಕಾಂಗ್ರೆಸ್​ಗೆ ಹೋಗಲಿ, ನಾನು ಜೀವನ ಪರ್ಯಂತ ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದ್ದೇನೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ್​ ಜಿಗಜಿಣಗಿ ಹೇಳಿದರು. ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಮನಬಿಚ್ಚಿ ವಿಜಯಪುರದಲ್ಲಿ ಮಾತನಾಡಿದ ರಮೇಶ್ ಜಿಗಜಿಣಗಿ​ ನಾನು ಕಾಲೇಜು ದಿನಗಳಿಂದಲೇ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಾ ಬಂದಿದ್ದೇನೆ.

ಕಾರಣ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿ ಕಾಂಗ್ರೆಸ್ ವಿರುದ್ದ ಸಿಡಿದೇಳುವಂತೆ ಮಾಡಿತು ಎಂದು ಕಿಡಿಕಾರಿದರು. ನಾನು ವಿದ್ಯಾವಂತನಾಗಿದ್ದ ಕಾರಣದಿಂದ ಕಾಂಗ್ರೆಸ್ ಪಕ್ಷದ ನಡೆಯ ಬಗ್ಗೆ ಪರಿಜ್ಞಾನವಿತ್ತು.‌ ಆ ಭಾವನೆ ಯಾರು ಹೋಗಲಾಡಿಸಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ ಮತ ಬ್ಯಾಂಕ್ ದಲಿತರು, ಹಿಂದುಳಿದವರೇ ಆಗಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಈ ಹಿಂದೆ ಈ ರೀತಿ ಮತ ಹಾಕುವುದು ಇತ್ತು. ಆವಾಗ ದಲಿತರು ಅವಿದ್ಯಾವಂತರಾಗಿದ್ದು‌, ಹೆಬ್ಬೆಟ್ಟು ಒತ್ತುವ ಕಾಲವಿತ್ತು. ಈಗ ಅವರು ವಿದ್ಯಾವಂತರಾಗಿದ್ದಾರೆ. ಯಾವ ಪಕ್ಷ ಅಭಿವೃದ್ಧಿ ಪರವಿದೆ ಎಂಬ ಅರಿವು ಇದೆ ಎಂದು ಹೇಳಿದರು.

ಕಾಂಗ್ರೆಸ್ ನಮ್ಮನ್ನು ಮತ ಬ್ಯಾಂಕ್ ಮಾಡಿಕೊಂಡಿತ್ತು.‌ ಹೊರತು ಯಾವ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಅವರೇ ಹೇಳುತ್ತಿದ್ದಾರೆ ಎಂದರು. ಈ ಹಿಂದೆ ಕಾಂಗ್ರೆಸ್ ಪರ ಯಾವ ವಾತಾವರಣ ಇತ್ತು ಎಂದರೆ ಸ್ವತ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನನ್ನ ಅಜ್ಜಿ ಕಾಂಗ್ರೆಸ್ ಗೆ ಮತ ಹಾಕಿದ್ದಳು ಎಂದು ಅಂದಿನ ಕಾಲದ ಪರಿಸ್ಥಿತಿಯನ್ನು ಮೆಲುಕು ಹಾಕಿದರು.

ಟಿಕೆಟ್ ನೀಡದಿದ್ದರೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತೇನೆ: ತಾವು ಬರುವ ಚುನಾವಣೆಯಲ್ಲಿ ನಾಗಠಾಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಿಗಜಿಣಗಿ, ನಾನು‌ ನಾಗಠಾಣ ಕ್ಷೇತ್ರದ ಆಕಾಂಕ್ಷಿನೋ ಅಲ್ಲ ಎಂಪಿ ಟಿಕೆಟ್ ಆಕಾಂಕ್ಷಿ ಸಹ ಅಲ್ಲ ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ, ಇಲ್ಲವಾದರೆ ಮನೆಯಲ್ಲಿ ಕಾಲ‌‌ ಕಳೆಯುವೆ ಎಂದು ಹೇಳಿದರು. ಸಾಕು 43 ವರ್ಷ ರಾಜಕೀಯ ಜೀವನ ಕಳೆದಿದ್ದೇನೆ ಇನ್ನಷ್ಟು ವರ್ಷ ಈ ರಾಜಕೀಯದಲ್ಲಿ ಇರಬೇಕು ಎಂದು ಪ್ರಶ್ನಿಸಿದರು.

‌ವಿಧಾನಸಭೆ ಚುನಾವಣೆ ಸ್ಪರ್ಧಿಸಿ ದಲಿತ ಸಿಎಂ ಆಗಬೇಕು ಎನ್ನುವ ಆಸೆ ಇಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದಲಿತ ಸಿಎಂ ಕರ್ನಾಟಕದಲ್ಲಿ ಆಗುವುದು ನಿಶ್ವಿತ, ಅಂಥ ಅರ್ಹತೆ ಇದ್ದವರು ಬಂದೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ಹೊಸದಾಗಿ ಗಾಲಿ ಜನಾರ್ದನ ರೆಡ್ಡಿ ಸ್ಥಾಪನೆ ಮಾಡಿ ಪ್ರಾದೇಶಿಕ ಪಕ್ಷ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಯಶಸ್ವಿಯಾಗಿಲ್ಲ ಎನ್ನುವ ಮೂಲಕ ಬಿಎಸ್​​​ವೈ ಮತ್ತು ಶ್ರೀರಾಮುಲು ಅವರು ಹಿಂದೆ ಸ್ಥಾಪಿಸಿದ್ದ ಪ್ರಾದೇಶಿಕ ಪಕ್ಷಗಳ ಅಧೋಗತಿ ಬಗ್ಗೆ ಅವರ ಹೆಸರು ತೆಗೆದುಕೊಳ್ಳದೇ ಟಾಂಗ್ ನೀಡಿದರು.‌

ಇದನ್ನೂ ಓದಿ :ಯಾವ ಪಾರ್ಟಿಯಿಂದಾದ್ರೂ ಸರಿ, ದಲಿತ ಸಿಎಂ ಆಗಲೇಬೇಕು: ರಮೇಶ ಜಿಗಜಿಣಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.