ETV Bharat / state

ಈ ಬಾರಿ ಬಿಜೆಪಿ ಭದ್ರಕೋಟೆ ಛಿದ್ರವಾಗುತ್ತಾ... ಇಲ್ಲಾ ಜಿಗಜಿಣಗಿ ಕಮಾಲ್​​​ ಮುಂದುವರೆಯುತ್ತಾ? - ಬಿಜೆಪಿ

ಸಂಸದ ರಮೇಶ್​​ ಜಿಗಜಿಣಗಿ ಅವರಿಗೆ ಟಿಕೆಟ್ ನೀಡಬಾರದು ಎಂದು ನಗರ ಶಾಸಕ ಬಸನಗೌಡ ಪಾಟೀಲ್​ (ಯತ್ನಾಳ) ಆಗ್ರಹಿಸಿದ್ದರು. ಹೊಸ ಮುಖಕ್ಕೆ ಮಣೆ ಹಾಕಬೇಕು ಎಂದು ವರಿಷ್ಠರಿಗೆ ಮನವಿ ಮಾಡಿದ್ದರು. ಇನ್ನೊಂದು ಗುಂಪು ಜಿಗಜಿಣಗಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿತ್ತು.

ವಿಜಯಪುರ
author img

By

Published : May 22, 2019, 5:03 PM IST

ಲೋಕಸಭಾ ಮೀಸಲು ಕ್ಷೇತ್ರವಾಗಿರುವ ವಿಜಯಪುರದಲ್ಲಿ ಜಾತಿ ಲೆಕ್ಕಾಚಾರ ಜೋರಾಗೇ ನಡೆದಿದೆ. ಸತತ ಎರಡು ಬಾರಿ ಈ ಕ್ಷೇತ್ರ ಪ್ರತಿನಿಧಿಸಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಅಣಿಯಾಗಿದ್ದಾರೆ. ಇವರಿಗೆ ಟಕ್ಕರ್​ ಕೊಡಲು ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್​​ನ ಸುನಿತಾ ಚವ್ಹಾಣ್​ ಸಹ ಎಲ್ಲ ಪ್ರಯತ್ನ ಮಾಡಿದ್ದಾರೆ.

ಈ ಬಾರಿ ಬಿಜೆಪಿ ಭದ್ರಕೋಟೆ ಛಿದ್ರವಾಗುತ್ತಾ?

ಸುನಿತಾ ಚವ್ಹಾಣ್​ ಜಿಗಜಿಣಗಿಗೆ ಕೊಡ್ತಾರಾ ಟಕ್ಕರ್​ ?

ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಆದರೆ, ಈ ಬಾರಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುನೀತಾ ಚವ್ಹಾಣ ಪರ ಮೂವರು ಪ್ರಭಾವಿ ಸಚಿವರು, ಇಬ್ಬರು ಎಂಎಲ್​ಸಿಗಳು ಸೇರಿದಂತೆ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಕುಮಾರಸ್ವಾಮಿ ಪ್ರಚಾರ ಮಾಡಿ ಹೋದ ಮೇಲೆ ಮತದಾನದ ಮೇಲೆ ಸ್ವಲ್ವ ಪ್ರಭಾವ ಬೀರಿದಂತೆ ಕಂಡು ಬಂದಿದೆ ಎಂಬ ಮಾತು ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ.

ಹೀಗಿದೆ ಕ್ಷೇತ್ರದಲ್ಲಿನ ಲೆಕ್ಕಾಚಾರ

ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟಾರೆ ಶೇ. 60.71ರಷ್ಡು ಮತದಾನ ಆಗಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ ಶೇ. 3ರಕ್ಕಿಂತ ಹೆಚ್ಚು. ಒಟ್ಟು 17,95,931 ಮತದಾರರಲ್ಲಿ 11,08058 ಜನ ಮತ ಹಾಕಿದ್ದಾರೆ. ಇವರಲ್ಲಿ 5,86,804 ಪುರುಷರು, 5,21,227 ಮಹಿಳೆಯರು ಹಾಗೂ 27 ತೃತೀಯ ಲಿಂಗಿಗಳು ಹಕ್ಕು ಚಲಾಯಿಸಿದ್ದಾರೆ. ಇಂಡಿ ಮತ ಕ್ಷೇತ್ರದಲ್ಲಿ ಹೆಚ್ಚು ಲಂಬಾಣಿ ಜನಾಂಗವಿರುವ ಕಾರಣ ಡಾ. ಸುನೀತಾ ಚವ್ಹಾಣ ಈ ಭಾಗದಲ್ಲಿ ಹೆಚ್ಚು ಮತ ಗಳಿಸುವ ಸಾಧ್ಯತೆಗಳಿವೆ. ಈ ಬಾರಿ ಲಿಂಗಾಯತರು ಬಹಿರಂಗವಾಗೇ ಮೈತ್ರಿಕೂಟದ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರೂ ಲಿಂಗಾಯತ ಸಂಘಟನೆಗಳು ಚದುರಿರುವ ಕಾರಣ ಮತ ವಿಭಜನೆಯಾಗಿರಬಹುದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

ಜಿಗಜಿಣಗಿ ಗೆಲ್ಲುವ ಫೇವರೆಟ್

ವಿಜಯಪುರ ಜಿಲ್ಲೆಯ 8 ಮತಕ್ಷೇತ್ರದಲ್ಲಿ ಬಿಜೆಪಿ 3, ಕಾಂಗ್ರೆಸ್ 3 ಹಾಗೂ ಜೆಡಿಎಸ್ ಎರಡರಲ್ಲಿ ಜಯ ಗಳಿಸಿವೆ. ಕಾಂಗ್ರೆಸ್ ಮೈತ್ರಿ ಧರ್ಮ ಪಾಲನೆಗೆ ಬಹಿರಂಗವಾಗಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರೂ ಸಹ ಒಳ ಒಳಗೆ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಿರುವುದು ಜಿಲ್ಲೆಯಲ್ಲಿ ಗುಟ್ಟಾಗೇನೂ ಉಳಿದಿಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದರೆ, ಬಿಜೆಪಿ ಅಭ್ಯರ್ಥಿ ಸೋಲಿಸಬಹುದಿತ್ತು ಎನ್ನುವುದು ಜಿಲ್ಲೆಯ ರಾಜಕೀಯ ಪಂಡಿತರ ಆಂಬೋಣ.

ರೆಬಲ್​ ಶಾಸಕರು ಜಿಗಜಿಣಗಿಗೆ ತರ್ತಾರಾ ಆತಂಕ?

ಜಿಲ್ಲಾ ಬಿಜೆಪಿಯಲ್ಲಿ ಕಳೆದ ಎರಡು ವರ್ಷಗಳಿಂದ ಮುಖಂಡರಲ್ಲಿ ಉಂಟಾಗಿರುವ ಭಿನ್ನಮತ ಇನ್ನೂ ಶಮನವಾಗಿಲ್ಲ. ಸಂಸದ ರಮೇಶ ಜಿಗಜಿಣಗಿ ಅವರಿಗೆ ಟಿಕೆಟ್ ನೀಡಬಾರದು ಎಂದು ನಗರ ಶಾಸಕ ಬಸನಗೌಡ ಪಾಟೀಲ್​ (ಯತ್ನಾಳ) ಆಗ್ರಹಿಸಿದ್ದರು. ಹೊಸ ಮುಖಕ್ಕೆ ಮಣೆ ಹಾಕಬೇಕು ಎಂದು ವರಿಷ್ಠರಿಗೆ ಮನವಿ ಮಾಡಿದ್ದರು. ಇನ್ನೊಂದು ಗುಂಪು ಜಿಗಜಿಣಗಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿತ್ತು. ಎರಡು ಗುಂಪುಗಳ ಭಿನ್ನಮತ ನಾಮಪತ್ರ ಸಲ್ಲಿಸುವುದರಿಂದ ಹಿಡಿದು ಮತದಾನ ಮುಗಿಯುವರೆಗೂ ಮುಂದುವರೆದಿತ್ತು.

ಕೊನೆಗೂ ಪ್ರಚಾರಕ್ಕೆ ಬರಲಿಲ್ಲ ಯತ್ನಾಳ್​

ಶಾಸಕ ಬಸನಗೌಡ ಪಾಟೀಲ್​ (ಯತ್ನಾಳ) ಕೊನೆಯವರೆಗೂ ಜಿಗಜಿಣಗಿ ಪರ ಪ್ರಚಾರಕ್ಕೆ ಬರಲೇ ಇಲ್ಲ. ಇದು ಎಲ್ಲೋ ಹಿಂದೂ ಮತಗಳ ವಿಭಜನಗೆ ಕಾರಣವಾಗಿದೆಯಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಸದ್ಯ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿನ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿವೆ. ಇದೆಲ್ಲರ ಮಧ್ಯೆ ಮಹಿಳೆ ಎಂಬ ಅನುಕಂಪದ ಮೇಲೆ ಮತದಾರ ಬದಲಾವಣೆ ಬಯಸಿದ್ದಾದಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದರೂ ಅಚ್ಚರಿ ಪಡುವಂತಿಲ್ಲ. ಏನೇ ಇದ್ದರು ನಾಳೆಯ ಫಲಿತಾಂಶದಿಂದ ಇಬ್ಬರ ಭವಿಷ್ಯ ಹೊರ ಬೀಳಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.