ಮುದ್ದೇಬಿಹಾಳ (ವಿಜಯಪುರ): ತಾಳಿಕೋಟಿ ಪಟ್ಟಣ ಸಂಪರ್ಕಿಸುವ ದೋಣಿ ಸೇತುವೆಯ ಬಳಿ ಗುತ್ತಿಗೆದಾರರೊಬ್ಬರಿಗೆ ಸೇರಿದ ನೀರಿನ ಟ್ಯಾಂಕರ್ ಮಗುಚಿ ಬಿದ್ದಿದೆ. ವಿಜಯಪುರ-ತಾಳಿಕೋಟಿ ಸಂಪರ್ಕ ಸೇತುವೆಯ ಬಳಿ ಕೆಲಸ ನಡೆಯುತಿದ್ದು, ಗುತ್ತಿಗೆದಾರ ಬಸನಗೌಡ ಪಾಟೀಲ್(ವಣಕ್ಯಾಳ )ಎಂಬುವರು ಇಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದಾರೆ. ಈ ಸೇತುವೆ ಮೇಲೆ ನೀರಿನ ಟ್ಯಾಂಕರ್ ತೆಗೆದುಕೊಂಡು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಟ್ಯಾಂಕರ್ ಸಮೇತ ನದಿಗೆ ಪಲ್ಟಿಯಾಗಿದೆ.
ವಾಣಿಜ್ಯ ನಗರ ತಾಳಿಕೋಟಿ ಪಟ್ಟಣ ಸಂಪರ್ಕಿಸುವ ಮುಖ್ಯಸೇತುವೆಯ ಕಾಮಗಾರಿಯನ್ನು ಅಧಿಕಾರಿಗಳು ತ್ವರಿತವಾಗಿ ಮಾಡದೇ ಇರುವುದರಿಂದ ಇಂತಹ ಘಟನೆಗಳು ಮೇಲಿಂದ ಮೇಲೆ ಜರುಗುತ್ತಲೇ ಇವೆ. ಆದರೂ ಅಧಿಕಾರಿಗಳು ಮಾತ್ರ ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೂ ಹೊಸದಾಗಿ ಮುಖ್ಯಸೇತುವೆ ನಿರ್ಮಾಣ ಮಾಡುವ ಕೆಲಸ ಕೈಗೆತ್ತಿಕೊಂಡಿಲ್ಲ. ಮುಂಬರುವ ದಿನಗಳಲ್ಲಿ ಅಲ್ಪ ಮಳೆಯಾದರೂ ಸಾಕು ದೋಣಿ ನದಿ ತುಂಬಿ ಹರಿದು ಸದ್ಯಕ್ಕೆ ಇರುವ ವಾಹನ ಸಂಚಾರ ಸಹ ಸ್ಥಗಿತಗೊಳ್ಳುವ ಸಂಭವ ಇದೆ.
ಇದನ್ನೂ ಓದಿ:ಬಂಟ್ವಾಳದಲ್ಲಿ ಬೈಕ್ಗೆ ಲಾರಿ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು