ವಿಜಯಪುರ: ಮದ್ಯ ಸೇವಿಸಿದ ಚಾಲಕ ಅಡ್ಡಾದಿಡ್ಡಿ ಕಾರು ಚಲಾಯಿಸಿ ಅಪಘಾತ ಉಂಟುಮಾಡಿದ್ದು ಬೈಕ್, ಆಟೋ ರಿಕ್ಷಾದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಇದರಿಂದ ಕೋಪಗೊಂಡ ಮಹಿಳೆ ಕಾರಿನ ಬಳಿ ತೆರಳಿ ಚಾಲಕನಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ನಿನ್ನೆ (ಗುರುವಾರ) ರಾತ್ರಿ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿ ಘಟನೆ ನಡೆದಿದೆ.
ನಶೆಯಲ್ಲಿದ್ದ ಚಾಲಕ 2 ಆಟೋ ಹಾಗೂ ಬೈಕ್ಗೆ ಡಿಕ್ಕಿ ಹೊಡೆದಿದ್ದ. ಘಟನೆಯಿಂದ ಒಂದು ಆಟೋ ಪಲ್ಟಿಯಾಗಿದೆ. ಆರೋಪಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಯಿತು.
ಇದನ್ನೂ ಓದಿ: ಮಾರುಕಟ್ಟೆ ಮಧ್ಯದಲ್ಲೇ ಮಹಿಳೆಯಿಂದ ಯುವಕನಿಗೆ ಚಪ್ಪಲಿ ಏಟು.. ಕಾರಣ ನಿಗೂಢ
ಯುವಕನಿಗೆ ಚಪ್ಪಲಿ ಏಟು: ತನ್ನನ್ನು ಚುಡಾಯಿಸಿದ ಎಂದು ವಿದ್ಯಾರ್ಥಿನಿಯೋರ್ವಳು ಚಪ್ಪಲಿಯಿಂದ ಹುಡುಗನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹಾಸನದಲ್ಲಿ ಇತ್ತೀಚೆಗೆ ನಡೆದಿತ್ತು. ಆಟೋದಲ್ಲಿ ಬಂದಿಳಿದ ವಿದ್ಯಾರ್ಥಿನಿಗೆ ರೋಡ್ ರೋಮಿಯೋ ಒಬ್ಬ ರೇಗಿಸಿದನೆಂದು ಕಾರಣಕ್ಕೆ ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಸ್ಥಳೀಯರು ಆತನನ್ನು ಹಿಡಿದು ಪ್ರಶ್ನಿಸಿದಾಗ ಇದ್ದಕ್ಕಿದ್ದಂತೆ ವಿದ್ಯಾರ್ಥಿನಿ ಚಪ್ಪಲಿಯಿಂದ ಯುವಕನ ಮುಖಕ್ಕೆ ಹೊಡೆದಿದ್ದಾಳೆ. ಕೋಪೋದ್ರಿಕ್ತ ಸ್ಥಳೀಯರು ಕೂಡಾ ಸ್ಥಳದಲ್ಲೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದರು.
ಇದನ್ನೂ ಓದಿ: ನನ್ನನ್ನೇ ಚುಡಾಯಿಸ್ತಿಯಾ ಎಂದು ಯುವಕನಿಗೆ ನಡು ರಸ್ತೆಯಲ್ಲೇ ಚಪ್ಪಲಿ ಏಟು ಕೊಟ್ಟ ವಿದ್ಯಾರ್ಥಿನಿ