ವಿಜಯಪುರ: ರೈತರ ಉತ್ಪನ್ನ ಮಾರಾಟ ಮಾಡಲು ಮಾತ್ರ ಸೀಮಿತವಾಗ್ಬೇಕಿದ್ದ ನಗರದ ಎಪಿಎಂಸಿ ಮಾರುಕಟ್ಟೆ, ಸದ್ಯ ವಾಣಿಜ್ಯ ವ್ಯಾಪಾರ ಕೇಂದ್ರವಾಗಿ ಮಾರ್ಪಡ್ತಿದೆ ಅಂತಾ ರೈತರು ಆಕ್ರೋಶ ಹೊರ ಹಾಕ್ತಿದ್ದಾರೆ.
ಎಪಿಎಂಸಿ ರೈತರ ಬೆಳೆಗೆ ಬೆಂಬಲ ಬೆಲೆ ಸಿಗಲಿ ಎಂದು ಸರ್ಕಾರ ಸ್ಥಾಪಿಸಿದ ಮಾರುಕಟ್ಟೆ. ಗುಮ್ಮಟನಗರಿ ವಿಜಯಪುರ ನಗರದ ಮಾರುಕಟ್ಟೆಯ ಒಟ್ಟು 150 ಕ್ಕೂ ಅಧಿಕ ಮಳಿಗೆಗಳಿಗೆ ಎಲ್ಲರಿಗೂ ಲೈಸೆನ್ಸ್ ಆಧಾರಿತವಾಗಿ ಕೃಷಿ ಉತ್ಪನ್ನ ವಹಿವಾಟಿಗೆ ಅವಕಾಶ ನೀಡಲಾಗಿದೆ. ಆದ್ರೆ ಈ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾತ್ರ ಕಮರ್ಷಿಯಲ್ ಮಳಿಗೆ ಆರಂಭಿಸಲು ಅಧಿಕಾರಿಗಳು ಅವಕಾಶ ಮಾಡ್ತಿದ್ದಾರಾ? ಅಂತಾ ರೈತರು ಅನುಮಾನಿಸುತ್ತಿದ್ದಾರೆ.
ತರಕಾರಿ, ನಿಂಬೆಹಣ್ಣು, ಹತ್ತಿ ಸೇರಿದಂತೆ ರೈತರ ಉತ್ಪನ್ನ ಮಾರಾಟಕ್ಕೆ ಸೀಮಿತವಾದ ಮಾರುಕಟ್ಟೆಯಲ್ಲಿ ಸಿಮೆಂಟ್, ಪ್ಲಾಸ್ಟಿಕ್ ಸಂಬಂಧಿತ ಉಪಕರಣಗಳು, ತಂಪುಪಾನೀಯ, ಕಬ್ಬಿಣದ ವಸ್ತು ಸೇರಿದಂತೆ ಹಲವು ವಾಣಿಜ್ಯ ಮಳಿಗೆ ಆರಂಭವಾಗಿವೆ. ಇದಕ್ಕೆ ಅಧಿಕಾರಿಗಳು ಅವಕಾಶ ನೀಡಿರೋದ್ರಿಂದ ಸ್ಥಳೀಯರು ವಾಣಿಜ್ಯ ಮಳಿಗೆ ತೆರವುಗೊಳಿಸಿ, ಕೃಷಿ ಉತ್ಪನ್ನ ಮಾರಾಟಕ್ಕೆ ಮಾತ್ರ ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಇತ್ತ ವಾಣಿಜ್ಯ ವ್ಯಾಪಾರಕ್ಕೆ ಅವಕಾಶ ಕುರಿತು ಅಧಿಕಾರಿಗಳನ್ನ ಕೇಳಿದ್ರೆ, ಕೃಷಿ ಉತ್ಪನ್ನ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದ್ದೇವೆ. ಆದ್ರೆ ಕೆಲವು ವ್ಯಾಪಾರಿಗಳು ಕೃಷಿ ಸಂಬಂಧಿತ ಸರಕುಗಳನ್ನು ಮಾರಾಟ ಮಾಡ್ತಿದ್ದಾರೆ. 8 ಮಳಿಗೆಗಳಲ್ಲಿ ವಾಣಿಜ್ಯ ಸಂಬಂಧಿತ ಸರಕು ಮಾರಾಟ ಮಾಡ್ತಿದ್ದಾರೆ ಅಂತಾರೆ.
ಒಟ್ಟಿನಲ್ಲಿ ರೈತರಿಗೆ ಕೃಷಿ ಉತ್ಪನ್ನ ಮಾರಾಟ ಮಾಡಲು ಸಿಮೀತವಾಗಬೇಕಿದ್ದ ಎಪಿಎಂಸಿ, ಸದ್ಯ ವಾಣಿಜ್ಯೋದ್ಯಮ ಮಾರಾಟದ ಕೇಂದ್ರವಾಗ್ತಿರೋದು ರೈತರ ಕೆಂಗಣ್ಣಿಗೆ ಗುರಿಯಾಗ್ತಿದೆ.