ವಿಜಯಪುರ: 61 ಗಂಟೆಗಳ ಕಾಲ ತನ್ನ ಹೊಲದಲ್ಲಿ ರಂಟೆ ಹೊಡೆಯುವ ಮೂಲಕ ಯುವ ರೈತರೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಇವರ ಸಾಧನೆಗೆ ಹೆಬ್ಬಾಳ ಗ್ರಾಮಸ್ಥರು ಯುವಕನ ಮೆರವಣಿಗೆ ಮಾಡಿಸಿ ಸನ್ಮಾನಿಸಿದ್ದಾರೆ.
ಸತತವಾಗಿ 61 ಗಂಟೆಗಳ ಕಾಲ ಟ್ರ್ಯಾಕ್ಟರ್ ಮೂಲಕ ರೆಂಟೆ ಹೊಡೆದು ಸಾಧನೆ ಮಾಡಿದ ಜಿಲ್ಲೆಯ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದ ಹೊಳೆಬಸಪ್ಪ ಮುನಹಳ್ಳಿಯವರನ್ನು ಹೆಬ್ಬಾಳ ಗ್ರಾಮಸ್ಥರು ಸನ್ಮಾನಿಸಿದ್ದಾರೆ. ಹೊಳೆಬಸವ ತನ್ನ ಹೊಲದಲ್ಲಿ ಜನವರಿ 24 ರ ಬೆಳಗ್ಗೆ 6 ಗಂಟೆಯಿಂದ ಜನವರಿ 26ರ ಸಂಜೆ 7-30ರವರೆಗೂ ಟ್ರ್ಯಾಕ್ಟರ್ ಚಾಲನೆ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ನೆಮ್ಮದಿಯಾಗಿದ್ದೇವೆ, ಪಕ್ಷ ಬಿಡುವ ಪ್ರಮೇಯವೇ ಇಲ್ಲ: ಸಚಿವ ಮುನಿರತ್ನ
ನಿರಂತರ 61 ಗಂಟೆಗಳ ಕಾಲ ಟ್ರ್ಯಾಕ್ಟರ್ ಚಾಲನೆ ಮಾಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಂಟೆ ಹೊಡೆದ ವೇಳೆ ಗ್ರಾಮಸ್ಥರು ಸಹ ಹಲಗೆ ತಮಟೆ ಬಡಿದು ಯುವಕನಿಗೆ ಸಾಥ್ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ