ವಿಜಯಪುರ: ಕಳೆದ ಎರಡು ದಿನಗಳಿಂದ ಬಿಟ್ವು ಬಿಡದೆ ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದೆ. ಭಾನುವಾರ 10.04 ಮಿ.ಮೀಟರ್ ಮಳೆಯಾದರೆ. ಕಳೆದ ರಾತ್ರಿಯಿಂದ ಇಲ್ಲಿಯವರೆಗೆ 12.74 ಮಿ. ಮಿ. ಮಳೆಯಾಗಿದೆ.
ಕನ್ನೂರು ಗ್ರಾಮದಲ್ಲಿ ಅತಿ ಹೆಚ್ಚು 74.22 ಮಿ.ಮಿ. ಮಳೆ ದಾಖಲಾಗಿದೆ. ನಿನ್ನೆ ಭೂತನಾಳದಲ್ಲಿ 35 ಮಿ.ಮೀಟರ್ ಮಳೆಯಾಗಿತ್ತು. ವಿಜಯಪುರ ನಗರದ ಭೂತನಾಳದಲ್ಲಿ 13.80 ಮಿ. ಮೀ, ಕುಮಟಗಿಯಲ್ಲಿ 21.40 ಮಿ. ಮೀ., ಕನ್ನೂರು 74.20 ಮಿ.ಮೀ., ಮುದ್ದೇಬಿಹಾಳ 49 ಮಿ. ಮೀ., ನಾಲತವಾಡ 19.60 ಮಿ. ಮೀ., ಇಂಡಿ 17.50 ಮಿ. ಮೀ., ಹೊರ್ತಿ 58.40 ಮಿ. ಮೀ., ಸಿಂದಗಿ 30 ಮಿ.ಮೀ. ದೇವರ ಹಿಪ್ಪರಗಿ 18 ಮಿ. ಮೀ., ಕಡ್ಲೆವಾಡ ಪಿಸಿಎಚ್ ನಲ್ಲಿ 15 ಮಿ.ಮೀ. ಮಳೆ ದಾಖಲಾಗಿದೆ.
ಸೇತುವೆ ಜಲಾವೃತ: ಜಿಲ್ಲೆಯ ಡೋಣಿ ನದಿ, ಕೃಷ್ಣಾ ಹಾಗೂ ಭೀಮಾನದಿಗಳು ಸಂಪೂರ್ಣ ಭರ್ತಿಯಾಗಿವೆ. ಇಂದು ಸಹ ಮಹಾರಾಷ್ಟದಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದ್ದು ಕೃಷ್ಣಾ ಹಾಗೂ ಭೀಮಾನದಿ ಮತ್ತಷ್ಟು ರೌದ್ರಾವತಾರ ತಾಳಿದೆ. ಭೀಮಾನದಿಯ ಬಾಂದಾರ ಕಂ ಬ್ರೀಜ್ ಬಳಿ ತೋಟಗಳಿಗೆ ನೀರು ಹರಿಸಲು ಅಳವಡಿಸಿದ್ದ ಪಂಪ್ಸೆಟ್ಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
ಡೋಣಿ ನದಿಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಆದರೆ ಸಾರವಾಡ, ತೊನಶ್ಯಾಳ, ತಿಕೋಟಾ, ಹಿಟ್ನಳ್ಳಿಯ ಕೆಲ ಭಾಗದಲ್ಲಿ ಹೊಲಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ.
ತಾಲೂಕು ವಿವರ: ವಿಜಯಪುರ ತಾಲೂಕು- 7.17, ಬಬಲೇಶ್ವರ-7.1, ತಿಕೋಟಾ-39.2, ಬಾಗೇವಾಡಿ-2.6, ನಿಡಗುಂದಿ-1.6, ಕೊಲ್ಹಾರ-1.0, ಮುದ್ದೇಬಿಹಾಳ- 34.3, ತಾಳಿಕೋಟೆ- 13.25, ಇಂಡಿ-18.04, ಸಿಂದಗಿ- 11.6 ಹಾಗೂ ದೇವರಹಿಪ್ಪರಗಿ ತಾಲೂಕಿನಲ್ಲಿ 12.83 ಮೀಲಿ ಮೀಟರ್ ಸೇರಿ ಒಟ್ಟು 12.74 ಮೀಲಿ ಮೀಟರ್ ಮಳೆ ಕಳೆದ 24 ಗಂಟೆಯಲ್ಲಿ ಸುರಿದಿದೆ.