ETV Bharat / state

ರೈತರಿಗೆ ಮೈಕ್ರೋ ಎಟಿಎಂ ಸೌಲಭ್ಯ ಕಲ್ಪಿಸಿದ ವಿಜಯಪುರ ಡಿಸಿಸಿ ಬ್ಯಾಂಕ್​​ - ಶಿವಾನಂದ‌ ಪಾಟೀಲ

ರೈತರು ಸರಳವಾಗಿ ವ್ಯವಹರಿಸಲು ಹಾಗೂ ಸಮಯ ಉಳಿಸಲು ವಿಜಯಪುರ ಡಿಸಿಸಿ ಬ್ಯಾಂಕ್ ರೈತರಿಗೆ ಮೈಕ್ರೋ ಎಟಿಎಂ ಸೌಲಭ್ಯ ಕಲ್ಪಿಸಿದೆ.

ಡಿಸಿಸಿ ಬ್ಯಾಂಕ್‌
press meet
author img

By

Published : Nov 27, 2019, 10:09 PM IST

ವಿಜಯಪುರ: ರೈತರು ಸರಳವಾಗಿ ವ್ಯವಹರಿಸಲು ಹಾಗೂ ಸಮಯ ಉಳಿಸಲು ವಿಜಯಪುರ ಡಿಸಿಸಿ ಬ್ಯಾಂಕ್​​ನಿಂದ 37 ಶಾಖೆಗಳಲ್ಲಿ ಮೈಕ್ರೋ ಎಟಿಎಂ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ‌ ಪಾಟೀಲ ತಿಳಿಸಿದರು.

ಡಿಸಿಸಿ ಬ್ಯಾಂಕ್‌ನಲ್ಲಿ ನಡೆದ ಸುದ್ದಿಗೋಷ್ಠಿ

ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ 1,56,680 ರೈತರಿಗೆ ಕ್ರೆಡಿಟ್ ಕಾರ್ಡ್ ವಿತರಿಸಲಾಗುತ್ತಿದೆ. ಜೊತೆಗೆ 5 ಲೀಪ್‌ನ ಚೆಕ್ ಬುಕ್​​ ಕೊಡಲಾಗುತ್ತಿದ್ದು, ರೈತರ ಅಲ್ಪಾವಧಿ ಬೆಳೆ ಸಾಲವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಅಲ್ಲದೇ ಕ್ರೆಡಿಟ್​ ಕಾರ್ಡ್ ಪಡೆದ ರೈತರಿಗೆ ಪಿನ್ ಕೋಡ್ ನೀಡಲಾಗುವುದು ಎಂದರು. ಬೆಳೆ ಸಾಲದ ಹಣ ಪಡೆಯಲು ದಿನವಿಡೀ ಸಮಯ ಕಳೆಯಬೇಕಾಗಿದ್ದ ರೈತರು ಈಗ ಮೈಕ್ರೋ ಎಟಿಎಂ ಬಳಸಿ ಬೆಳ ಸಾಲವನ್ನು‌ ನೇರವಾಗಿ ಪಡೆಯಲು ಸಹಾಯಕವಾಗಿದೆ. ಹಾಗೂ ಈ ವ್ಯವಸ್ಥೆಯನ್ನು ಜಾರಿಗೆ ತಂದ ಕೀರ್ತಿ ವಿಜಯಪುರ ಡಿಸಿಸಿ ಬ್ಯಾಂಕ್​ಗೆ ಸಲ್ಲುತ್ತದೆ ಎಂದು ಶಿವಾನಂದ ಪಾಟೀಲ ಹೇಳಿದರು.

ಬ್ಯಾಂಕ್‌‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ.ಪಾಟೀಲ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ರೈತರಿಗೆ ಅಲ್ಪಾವಧಿ ಬೆಳೆ ಸಾಲ ನೀಡಿದ ಡಿಸಿಸಿ ಬ್ಯಾಂಕ್‌ಗಳ ಪೈಕಿ ನಮ್ಮ ಬ್ಯಾಂಕ್ 3ನೇ ಸ್ಥಾನ ಪಡೆದಿದೆ. ಒಟ್ಟು 37 ಶಾಖೆಗಳ ಪೈಕಿ 1,86,000 ರೈತರಿಗೆ 900 ಕೋಟಿ ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಸಿಇಒ ರಾಜಣ್ಣ ಮಾತನಾಡಿ, ರೈತರ ಬೆಳೆ ಸಾಲ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ‌. ರೈತರು ಮೈಕ್ರೋ ಎಟಿಎಂ ಅಥವಾ ಚೆಕ್ ಬಳಸಿ ಹಣ ಪಡೆಯಲು ಅನುಕೂಲವಾಗಿದೆ. ಇದರಿಂದ ಬ್ಯಾಂಕ್​ಗಳಲ್ಲಿ ರೈತರ ಅಲೆದಾಟ ಕಡಿಮೆಯಾಗುತ್ತದೆ, ಸಮಯ ಉಳಿಯುತ್ತದೆ. ರೈತರಿಗೆ ಆಗುವ ಮೋಸಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದು ಹೇಳಿದರು.

Intro:ವಿಜಯಪುರ: ಡಿಸಿಸಿ ಬ್ಯಾಂಕ್ ರೈತರು ಸರಳವಾಗಿ ವ್ಯವಹರಿಸಲು ಹಾಗೂ ಸಮಯ ಉಳಿಸಲು ವಿಜಯಪುರ ಡಿಸಿಸಿ ಬ್ಯಾಂಕ್ 37 ಶಾಖೆಗಳಲ್ಲಿ ಮೈಕ್ರೋ ಎಟಿಎಂ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ‌ ಪಾಟೀಲ ತಿಳಿಸಿದರು.

Body:ನಗರದ ಡಿಸಿಸಿ ಡಿಸಿಸಿ ಬ್ಯಾಂಕ್‌ನಲ್ಲಿ ಮಾಧ್ಯಮ ಗೋಷ್ಠಿ ನಡಿಸಿ ಮಾತನಾಡಿದ ಅವರು, ಜಿಲ್ಲೆಯ 156680 ರೈತರಿಗೆ ಕ್ರೆಡಿಟ್ ಕಾರ್ಡ್ ವಿತರಿಸಲಾಗುತ್ತಿದೆ. ಜೊತೆಗೆ 5 ಲಿಪ್‌ನ್ನ ಚಕ್ ಬುಕ್ಕ ನ್ನು ಕೊಡಲಾಗುತ್ತಿದ್ದು,ರೈತರ ಅಲ್ಪಾವಧಿ ಬೆಳೆ ಸಾಲದವನ್ನು ನೇರವಾಗಿ ರೈತರ ಖಾತೆ ಜಮಾ ಮಾಡಲಾಗುತ್ತಿದೆ. ಮೈಕ್ರೋ ಎಟಿಎಂ ಮೂಲಕ ರೈತರು ಹಣ ಪಡೆಯಬಹುದಾಗಿದೆ. ಮೈಕ್ರೋ ಎಟಿಎಂ ಮೂಲಕ ಖಾತೆಯ ಹಣ ಕಡಿತವಾಗುತ್ತದೆ. ಅದ್ರೆ ಬ್ಯಾಂಕ್ ಮೂಲಕ ತಕ್ಷಣೆ ಹಣ ನೀಡಲಾಗುವುದು. ಕ್ರಿಕೆಟ್ ಕಾರ್ಡ್ ಪಡೆದ ರೈತರಿಗೆ ಪಿನ್ ಕೋಡ್ ನೀಡಲಾಗುದು. ಇದರಿಂದ ರೈತರಿಗೆ ಬೆಳೆ ಸಾಲದ ಹಣ ಪಡೆಯಲು ದಿನವಿಡಿ ಸಮಯ ಕಳೆಯಬೇಕಾಗುತ್ತಿತು. ಮೈಕ್ರೋ ಎಟಿಎಂ ಬಳಸಿ ಬೆಳ ಸಾಲವನ್ನು‌ ನೇರವಾಗಿ ಪಡೆಯಲು ಸಹಾಯಕವಾಗಿದೆ. ಇನ್ನೂ ರೈತರು ಚಕ್ ಬಳಸಿ ಯಾವುದೇ ಬ್ಯಾಂಕ್‌ನಲ್ಲಾದ್ರೂ ಹಣ ಪಡೆಯುವ ಅವಕಾಶವನ್ನು ರೈತರಿಗೆ ಕಲ್ಪಿಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಜಾರಿಗೆ ತಂದ ಮೂರನೇ ಕೀರ್ತಿ ವಿಜಯಪುರ ಡಿಸಿಸಿ ಬ್ಯಾಂಕ್ ಸಲ್ಲುತ್ತದೆ.

ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡಲಾಗಿದೆ.ಕಾರಣ ಸರ್ಕಾರ ಶತಮಾನೋತ್ಸವ ನಡೆಸಲು ಅನುಮತಿ ಕೇಳಲಾಗಿತು ತಡವಾಗಿ ಅದೇಶ ಬಂದಿದ್ದೆ ಅಲ್ಲದೇ ಶತಮಾನೋತ್ಸವ ಬಿಲ್ಡಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ ಮುಗಿಲ್ಲ ಅತಿಥಿಗಳ ಸಮಯ ನಿಗದಿಯಾಗಿಲ್ಲ ಶತಮಾನೋತ್ಸವ ನಡೆಸಲು ಸಿವಿಲ್ ಆಸ್ಪತ್ರೆ ಜಾಗಕ್ಕೆ ಅನುಮತಿ ಸಿಕ್ಕಿದೆ.ಅಲ್ಲದೇ ಸರ್ಕಾರ 8 ಕೋಟಿ ಶತಮಾನೋತ್ಸವ ಆಚರಣೆ ಮಾಡಲು ಅನುದಾನ ನೀಡಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದ್ರು.

ಬ್ಯಾಂಕ್‌‌ನ ವ್ಯವಸ್ಥಾಪಕ ನಿರ್ದೇಶಕ ಎಂ ಜಿ ಪಾಟೀಲ ಮಾತನಾಡಿ ರಾಜ್ಯದಲ್ಲಿ ಅತಿ ಹೆಚ್ಚು ರೈತರಿಗೆ ಅಲ್ಪವಧಿ ಬೆಳೆಸಾಲ ನೀಡಿದ ಡಿಸಿಸಿ ಬ್ಯಾಂಕ್‌ಗಳ ಪೈಕಿ ನಮ್ಮ ಬ್ಯಾಂಕ್ 3 ನೇ ಸ್ಥಾನ ಪಡೆದಿದೆ. ಒಟ್ಟು 37 ಶಾಲೆಗಳ ಪೈಕಿ 186000 ರೈತರಿಗೆ 900 ಕೋಟಿ ಅಲ್ಪವಧಿ ಬೆಳೆಸಾಲ ಜಿಲ್ಲೆಯ ರೈತರಿಗೆ ನೀಡಲಾಗಿದೆ ಎಂದು ತಿಳಿಸಿದರು.

Conclusion:ಡಿಸಿಸಿ ಬ್ಯಾಂಕ್ ಸಿಇಓ ರಾಜಣ್ಣ ಮಾತನಾಡಿ ರೈತರಿ ಬೆಳೆ ಸಾಲ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ‌. ರೈತರು ಮೈಕ್ರೋ ಎಟಿಎಂ ಅಥವಾ ಚಕ್ ಬಳಸಿ ಹಣ ಪಡೆಯಲು ಅನುಕೂಲವಾಗದೆ. ಇದರಿಂದ ಬ್ಯಾಂಕ್ ಗಳಲ್ಲಿ ರೈತರ ಅಲೆದಾಟ ಕಡಿಮೆಯಾಗುತ್ತದೆ ಸಮಯ ಉಳಿಯುತ್ತದೆ. ರೈತರಿಗೆ ಆಗುವ ಮೋಸಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದು ಹೇಳಿದ್ರು..

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.